ಶನಿವಾರ, ಏಪ್ರಿಲ್ 17, 2021
22 °C

ಹದಗೆಟ್ಟ ರಸ್ತೆ: ಸಾರ್ವಜನಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಸುಸಜ್ಜಿತ ರಸ್ತೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಿರೂರು ಪಾರ್ಕ್, ಆನಂದ ನಗರ, ಹೊಸೂರು ರಸ್ತೆ, ಪ್ರಶಾಂತ ಕಾಲೊನಿ, ವಿಕಾಸ ನಗರ, ವಿದ್ಯಾನಗರ, ಪ್ರಶಾಂತ ಕಾಲೊನಿ ಹಾಗೂ ಚೇತನಾ ಕಾಲೇಜು ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮೂಡಿಸಿವೆ.ಟಾರಿನ ಹೊದಿಕೆಯಿಂದ ಹೊರಗೆ ಮೈ ಚಾಚಿದ ಮಣ್ಣಿನ ಹೊಂಡ, ಕೆಸರು, ಗುಂಡಿ ಬಿದ್ದ ರಸ್ತೆಗಳು ಸಾಮಾನ್ಯ ಎನಿಸಿವೆ. ಮಳೆ ಆರಂಭ ವಾಗುತ್ತಿದ್ದಂತೆಯೇ ರಸ್ತೆಗಳ ದುಸ್ಥಿತಿ ಬಯಲಾ ಗುತ್ತಿದೆ. ಈ ಪ್ರದೇಶಗಳಲ್ಲಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗಬೇಕಾಗಿದೆ.ಒಳಚರಂಡಿ ಕಾಮಗಾರಿ ತಂದ ಫಜೀತಿ:

ಗೋಕುಲ ರಸ್ತೆಯಿಂದ ಉಣಕಲ್ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು, ರಸ್ತೆಯ ಮಧ್ಯೆ ಗುಂಡಿ ತೆಗೆದು ಪೈಪ್ ಅಳವಡಿಸಿರುವುದು ದುರವಸ್ಥೆ ಹೆಚ್ಚಳಗೊಳ್ಳಲು ಕಾರಣವಾಗಿದೆ.

ಕಾಮಗಾರಿ ಪೂರ್ಣಗೊಂಡ ನಂತರ ಸರಿಯಾಗಿ ರಸ್ತೆಯನ್ನು ಮುಚ್ಚದ ಪರಿಣಾಮ ಮಳೆ ನೀರು ನಿಂತು ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿದೆ. ಇನ್ನು ಕೆಲವೆಡೆ ಅಪೂರ್ಣ ಕಾಮಗಾರಿ ಸಂಚಾರಕ್ಕೆ ತೊಂದರೆಯುಂಟು ಮಾಡಿದೆ. ಮಳೆ ಬರುವ ಮುನ್ನ ದೂಳಿನ ಆಗರ ವಾಗಿದ್ದ ರಸ್ತೆಗಳು ಈಗ ಅಲ್ಲಿ ಸಂಚರಿಸುವವರಿಗೆ ಕೆಸರಿನ ಮಜ್ಜನ ಮಾಡಿಸುತ್ತಿವೆ.ಗುಂಡಿ ಮುಚ್ಚಲು ಹಾಕಿದ್ದ ಜಲ್ಲಿ ಕಲ್ಲುಗಳು ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದ್ದರೆ, ಇನ್ನೂ ಕೆಲವೆಡೆ ರಸ್ತೆ ತುಂಬಾ ಹರಡಿ ನಿಂತಿವೆ. ಇದರಿಂದ ಅಪಘಾತಗಳು ಸಾಮಾನ್ಯ ಎನಿಸಿವೆ. ವಾಹನಗಳು ಇರಲಿ ಪಾದಚಾರಿಗಳು ಸಂಚರಿಸು ವುದು ದುಸ್ತರವಾಗಿದೆ.ಕಾಮಗಾರಿ ಕೈಗೆತ್ತಿ ಕೊಂಡಿರುವ ಕಂಪೆನಿಯವರೇ ರಸ್ತೆ ದುರಸ್ತಿ ಮಾಡಲಿ ಎಂಬುದು ಪಾಲಿಕೆಯ ನಿಲುವಾಗಿದ್ದರೆ ಸಂಬಂಧಿಸಿದ ಕಂಪೆನಿಗೆ ಎಚ್ಚರಿಕೆ ಅಥವಾ ಮಾರ್ಗದರ್ಶನ ನೀಡಲಿ ಎಂದು ಶಿರೂರು ಪಾರ್ಕ್ ನಿವಾಸಿಗಳು ಒತ್ತಾಯಿ ಸುತ್ತಾರೆ.ಚೇತನಾ ಕಾಲೇಜು ಮುಖ್ಯ ರಸ್ತೆಯು ದುರಸ್ತಿ ಕಾಣದೆ ಹದಗೆಟ್ಟಿದೆ. ರಸ್ತೆ-ಗುಂಡಿಯ ನಡುವೆ ವ್ಯತ್ಯಾಸವೇ ಕಾಣದಂತಾಗಿದೆ.ಶೀಘ್ರ ಕ್ರಮ: ನಗರದ ರಸ್ತೆಗಳ ದುಸ್ಥಿತಿಯ ಬಗ್ಗೆ ಪಾಲಿಕೆ ಸೂಪರಿಟೆಂಡಿಂಗ್ ಎಂಜಿನಿಯರ್ ಅವರಿಂದ ವರದಿ ತರಿಸಿಕೊಂಡು ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಜಂಟಿ ಆಯುಕ್ತ ವೀರೇಶ ಕುಂದಗೋಳ `ಪ್ರಜಾವಾಣಿ~ಗೆ ತಿಳಿಸಿದರು.ಶಿರೂರು ಪಾರ್ಕ್ ಪ್ರದೇಶದಲ್ಲಿ ರಸ್ತೆ ದುರಾವಸ್ಥೆ ಗಮನಕ್ಕೆ ಬಂದಿರಲಿಲ್ಲ. ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವ ಜನಿಕರಿಗೆ ತೊಂದರೆಯಾಗಿರಬಹುದು. ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.