ಹನಿಕೆ ಗ್ರಾಮದಲ್ಲಿ ಅಭಿವೃದ್ಧಿಯ ಕನವರಿಕೆ

7

ಹನಿಕೆ ಗ್ರಾಮದಲ್ಲಿ ಅಭಿವೃದ್ಧಿಯ ಕನವರಿಕೆ

Published:
Updated:
ಹನಿಕೆ ಗ್ರಾಮದಲ್ಲಿ ಅಭಿವೃದ್ಧಿಯ ಕನವರಿಕೆ

ಬೇಲೂರು: ತಾಲ್ಲೂಕಿನ ಹನಿಕೆ ಗ್ರಾಮ `ದನಗಳ ಸಂತೆಗೆ~ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಡೆಯುವ ವಾರದ ಸಂತೆಯನ್ನು ಹನಿಕೆ ಸಂತೆ ಎಂದೇ ಕರೆಯಲಾಗುತ್ತದೆ. ಹನಿಕೆ ಗ್ರಾಮ ಎಲ್ಲ ಗ್ರಾಮಗಳಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಅಷ್ಟಾ ಗಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಎ.ಎನ್. ಎಂ. ಆರೋಗ್ಯ ಉಪ ಕೇಂದ್ರ ಪಾಳು ಬಿದ್ದಿದೆ. ಇಲ್ಲಿನ 2 ಕೆರೆಗಳು ಹೂಳು ತುಂಬಿವೆ.ಬೇಲೂರು- ಚಿಕ್ಕಮಗಳೂರು ರಾಜ್ಯ ಹೆದ್ದಾರಿಯಿಂದ 3 ಕಿ.ಮೀ. ದೂರದ ಹನಿಕೆ ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು, ಇಲ್ಲಿನ ಜನಸಂಖ್ಯೆ ಸುಮಾರು 1500. ಪ್ರತಿ ಭಾನುವಾರ ನಡೆಯುವ ಸಂತೆ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರು ಪಡೆದಿದೆ.ಹನಿಕೆ ಸಂತೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ನಡೆಯುವ ದನಗಳ ವಹಿವಾಟು. ಉತ್ತಮ ತಳಿಯ ರಾಸು ಗಳ ಇಲ್ಲಿ ದೊರೆಯುತ್ತದೆ. ಹಾಸನ ಜಿಲ್ಲೆಯ ಬೆರಳೆಣಿಕೆಯಷ್ಟು ದನಗಳ ಸಂತೆಯ ಪೈಕಿ ಇದೂ ಒಂದಾಗಿದೆ. ಹಾಸನ, ಬೇಲೂರು, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಇಲ್ಲಿ ದನಗಳನ್ನು ಖರೀದಿಸಲು ಬರುತ್ತಾರೆ.

 

ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಜನರೂ ಸಹ ಹನಿಕೆ ಸಂತೆಯಲ್ಲಿ ರಾಸುಗಳನ್ನು ಖರೀದಿಸಲು ಬರುತ್ತಿದ್ದರು. ಇಲ್ಲಿನ ದನಗಳಿಗೆ ಅಷ್ಟೊಂದು ಬೇಡಿಕೆಯಿತ್ತು. ಈಗಲೂ ಇಲ್ಲಿ ಒಂದು ಜೋಡಿ ಎತ್ತಿನ ಬೆಲೆ 60 ಸಾವಿರ ಮತ್ತು ಹಸುವಿನ 35 ಸಾವಿರ ರೂಪಾಯಿ ವರೆಗೆ ಮಾರಾಟವಾ ಗುತ್ತಿರುವುದು ವಿಶೇಷವಾಗಿದೆ.

ಹನಿಕೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿಲ್ಲ. ಆದರೂ ದಲಿತ ಕಾಲೊನಿ ಸೇರಿದಂತೆ ಕೆಲ ಬೀದಿಗಳಿಗೆ ಕೊಳವೆ ಬಾವಿಯ ಅಗತ್ಯ ವಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿ ಗಳು ಈ ಬಗ್ಗೆ ಗಮನಹರಿಸಿ ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಆಗ್ರಹ. ದನಗಳ ಸಂತೆ ಇಲ್ಲಿ ನಡೆಯುವುದರಿಂದ ಇತ್ತೀಚೆಗೆ ಇಲ್ಲಿ ಪಶು ಆಸ್ಪತ್ರೆ ತೆರೆಯಲಾಗಿದೆ.ಸುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಒಬ್ಬ ವೈದ್ಯ ಮತ್ತು ನಾಲ್ವರು ದಾದಿಯರು ಇಲ್ಲಿದ್ದಾರೆ. ಆದರೆ, ಗ್ರಾಮದ ಒಳಭಾಗ ದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎ.ಎನ್.ಎಂ. ಆರೋಗ್ಯ ಉಪ ಕೇಂದ್ರ ಪಾಳು ಬಿದ್ದಿದೆ.

 

ಉತ್ತಮ ಸ್ಥಿತಿಯ ್ಲಲಿರುವ ಈ ಕಟ್ಟಡದಲ್ಲಿ ಯಾವ ಕೆಲಸ ಕಾರ್ಯಗಳು ನಡೆಯದೇ, ಗಿಡಗಂಟಿ ಗಳು ಬೆಳೆದು ನಿಂತಿವೆ. ಈ ಕಟ್ಟಡವನ್ನು ನರ್ಸ್‌ಗಳ ವಸತಿ ಗೃಹವನ್ನಾಗಿ ಪರಿವರ್ತಿಸಿ ನರ್ಸ್‌ಗಳು ಇಲ್ಲಿಯೇ ತಂಗುವ ವ್ಯವಸ್ಥೆ ಮಾಡಬಹುದಾಗಿದೆ. ಆದರೂ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಗಮನಹರಿಸಿಲ್ಲ. ವೈದ್ಯರು ಮತ್ತು ನರ್ಸ್‌ಗಳು ಗ್ರಾಮದಲ್ಲಿ ವಾಸ ವಾಗಿರುವುದಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಅನಾಹುತ ಸಂಭವಿಸಿದರೆ ರೋಗಿಗಳನ್ನು ಹಾಸನ ಅಥವಾ ಚಿಕ್ಕ ಮಗಳೂರಿಗೆ ಕರೆದುಕೊಂಡು ಹೋಗುವ ಸ್ಥಿತಿ ಇದೆ.ಬೇಲೂರಿನ ಎಪಿಎಂಸಿ ವ್ಯಾಪ್ತಿಗೆ ಒಳಪಡುವ ಹನಿಕೆ ಸಂತೆಯ ಅಭಿವೃ ದ್ಧಿಗೆ ಎಪಿಎಂಸಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದೆ. ಆದರೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆ ಯನ್ನು ಇಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿನ ಸಂತೆ ಕೆರೆ ಮತ್ತು ಕಿರಳ್ಳಿ ಕೆರೆಗಳು ಸುಮಾರು 500 ಎಕರೆ ಪ್ರದೇಶಕ್ಕೆ ನೀರು ಒದಗಿ ಸುವ ಕೆರೆಗಳಾಗಿವೆ. ಈ ಕೆರೆಗಳು ಈಗ ಹೂಳು ತುಂಬಿ ಹಾಳಾಗಿವೆ.ಕೆರೆಯನ್ನು ದುರಸ್ತಿ ಪಡಿಸಬೇಕಾದ ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಾಗಿದೆ ಎಂಬ ಅಸಮಾಧಾನ ಗ್ರಾಮಸ್ಥ ರದು. ಒಟ್ಟಾರೆ ಹಲವು ಸೌಲಭ್ಯ ಗಳನ್ನು ಹೊಂದಿರುವ ಹನಿಕೆ ಗ್ರಾಮ ಮತ್ತಷ್ಟು ಅಭಿವೃದ್ಧಿ ಕಾಣಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry