ಶನಿವಾರ, ಡಿಸೆಂಬರ್ 14, 2019
25 °C

ಹನುಮಸಾಗರ: ಗ್ರಾಮಸಭೆಗೆ ಗ್ರಾಮಸ್ಥರೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಗ್ರಾಮಸಭೆಗೆ ಗ್ರಾಮಸ್ಥರೇ ಇಲ್ಲ

ಹನುಮಸಾಗರ: ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಸಾರ್ವಜನಿಕರ ಕುಂದುಕೊರತೆಗಳ ಸಮಾಲೋಚನೆಗಾಗಿ ಗ್ರಾಮಸಭೆ ನಡೆಯಿತು.ಸಾರ್ವಜನಿಕರಿಗೆ ಸಭೆಯ ಮಾಹಿತಿ ಕೊರತೆಯ ಕಾರಣವಾಗಿ ಕೈಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.ಬಹುತೇಕ ಜನರು ಕುಡಿಯುವ ನೀರು, ಬೀದಿ ದೀಪ, ಚರಂಡಿಗಳ ಸ್ವಚ್ಛತೆ, ಸಿಸಿ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳ ಕುರಿತಾಗಿ ಸಮಸ್ಯೆಯನ್ನು ತೋಡಿಕೊಂಡರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಅಯ್ಯಪ್ಪ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ವಾರ್ಡುಗಳಿಗೆ ಭೇಟಿ ನೀಡಿ ಕೂಡಲೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. 

ಪ್ರತಿಕ್ರಿಯಿಸಿ (+)