ಶನಿವಾರ, ಮೇ 8, 2021
25 °C

ಹನುಮ ಜಯಂತಿ: ಸಂಭ್ರಮದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದೆಲ್ಲೆಡೆ ಶುಕ್ರವಾರ ಸಂಭ್ರ ಮದಿಂದ  ಹನುಮಜಯಂತಿ ಆಚರಣೆ ಮಾಡಲಾಯಿತು.

ಅವಳಿ ನಗರವಾದ ಗದಗ -ಬೆಟಗೇರಿ ಯಲ್ಲಿ ಇರುವ ಹತ್ತಾರು ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿಯು ಶ್ರದ್ಧಾಭಕ್ತಿಯಿಂದ ನೆರವೇರಿತು.ಕಿಲ್ಲಾದಲ್ಲಿರುವ ಜೋಡುಮಾರುತಿ ದೇವಸ್ಥಾನ, ವೀರನಾರಾಯಣ ಗುಡಿ ಪ್ರಾಂಗಣದಲ್ಲಿರುವ ಮಾರುತಿ ದೇವ ಸ್ಥಾನ, ಕೋನೇರಿ ಹೊಂಡದ ಪುರಾತನ ಮಾರುತಿ ದೇವರು,ಬಸವೇಶ್ವರನಗರ, ಎಸ್.ಎಂ.ಕೃಷ್ಣ ಕಾಲೋನಿ, ಹುಡ್ಕೋ ಕಾಲೋನಿ, ವಿವೇಕಾನಂದ ನಗರದ ಮಾರುತಿ ದೇವಸ್ಥಾನ, ಬ್ಯಾಂಕರ್ಸ್‌ ಕಾಲೋನಿಯಲ್ಲಿರುವ ಪಂಚಮುಖಿ ಮಾರುತಿ, ಬಸವೇಶ್ವರ ದೇವಸ್ಥಾನ, ಬೆಟ ಗೇರಿಯ ಸೆಟ್ಲ್‌ಮೆಂಟ್ ಮಾರುತಿ, ಕನ್ಯಾಳ ಅಗಸಿಯ ಧೂಳಿಕಟ್ಟಿ ಮಾರುತಿ ದೇವಸ್ಥಾನ, ಹೊಸಪೇಟ ಚೌಕ  ಸೇರಿ ದಂತೆ ಎಲ್ಲ ದೇವಸ್ಥಾನಗಳಲ್ಲಿ  ಮಾರುತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾ ಯಿತು. ತೊಟ್ಟಿಲೋತ್ಸವ, ಮೆರವಣಿಗೆ. ಅನ್ನಸಂತರ್ಪಣೆಯು ಸಾವಿರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ನಡೆ ಯಿತು. ಬ್ಯಾಂಕರ್ಸ್‌ ಕಾಲೋನಿಯ ಪಂಚ ಮುಖಿ ಮಾರುತಿ ದೇವಸ್ಥಾನದಲ್ಲಿ  ಇದೇ ಸಂದರ್ಭದಲ್ಲಿ ನೂತನ ಕಳಸಾರೋಹಣ ಕಾರ‌್ಯಕ್ರಮ ನಡೆಯಿತು. ಪುರುಷರು, ಮಹಿಳೆಯರು,ಯುವಕ ಯುವತಿಯರು ದೇವಸ್ಥಾನಕ್ಕೆ ಆಗಮಿಸಿ ಮಾರುತಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.