ಬುಧವಾರ, ಏಪ್ರಿಲ್ 14, 2021
24 °C

ಹಬ್ಬಗಳ ಆಚರಣೆಯಿಂದ ಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಬ್ಬಗಳ ಆಚರಣೆಯಿಂದ ಸಂಸ್ಕಾರ

ಮಂಗಳೂರು: `ಸಂಸ್ಕೃತಿಯ ಪ್ರತೀಕವಾದ ಹಬ್ಬಗಳ ಆಚರಣೆಯಿಂದ ಉತ್ತಮ ಸಂಸ್ಕಾರಪಡೆಯಲು ಸಾಧ್ಯ~ ಎಂದು ಉದ್ಯಮಿ ಮಂಗಲ್ಪಾಡಿ ನಾಮದೇವ ಶೆಣೈ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲ್ಲೂಕು ಘಟಕದ ಆಶ್ರಯದಲ್ಲಿ ನಗರದ ಶಾರದಾ ವಿದ್ಯಾಲಯದಲ್ಲಿ ಸೋಮವಾರ ಜರುಗಿದ `ಶ್ರಾವಣ ಸಂಜೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಇಂದಿನ ಆಧುನಿಕ ಶೈಲಿಯ ಬದುಕಿನಲ್ಲಿ ಹಳೆಯ ಸಂಪ್ರದಾಯಗಳು ಮರೆಯಾಗುತ್ತಿವೆ. ಪ್ರಕೃತಿಯು ನವ ತಾರುಣ್ಯಹೊಂದಿ ಸಂಭ್ರಮಿಸುವ ಶ್ರಾವಣ ಒಂದು ಸೀಮಿತ ಸಮಾಜದ ಆಚರಣೆಗೆ ಮೀಸಲಾದ ತಿಂಗಳಲ್ಲ. ಪ್ರಕೃತಿಯ ಜತೆಗಿನ ಆರಾಧನಾ ಭಾವವನ್ನು ತೋರಿಸುವ ಹಾಗೂ ನಿಸರ್ಗದೊಂದಿಗಿನ ಮಾನವನ ಅನುಸಂಧಾನಗಳನ್ನು ಈಗಿನ ಯುವಜನತೆಗೆ ಪರಿಚಯಿಸುವ ದೃಷ್ಟಿಯಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು ನಡೆಯಬೇಕು~ ಎಂದು ಅವರು ಹೇಳಿದರು.ಸಮಾರಂಭ ಉದ್ಘಾಟಿಸಿದ ಹಿರಿಯ ಸಾಹಿತಿ ಲಲಿತಾ ರೈ ಮಾತನಾಡಿ `ಅನುಭವದ ಹರಿವಿನಿಂದ ರಚಿಸಿದ ಸಾಹಿತ್ಯ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಶ್ರಾವಣದ ಸಂಭ್ರಮವನ್ನು ವರ್ಣಿಸಿ ಸಾಹಿತ್ಯವನ್ನು ರಚಿಸದ ಸಾಹಿತಿಗಳು ವಿರಳ~ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಶ್ರಾವಣ ನುಡಿ ಮತ್ತು ಹಾಡುಗಳ ಕುರಿತು ಜಿ.ಎಸ್.ಬಿ. ಮಹಿಳಾ ವೃಂದದ ಮಾಜಿ ಅಧ್ಯಕ್ಷೆ ಮರೋಳಿ ಸಬಿತಾ ನಾಯಕ್ ಮಾತನಾಡಿದರು. ಶ್ರಾವಣ ಮಾಸದ ಕುರಿತು ಸಾಹಿತಿ ರೂಪಕಲಾ ಆಳ್ವ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ವಕ್ತಾರ ಜನಾರ್ದನ ಹಂದೆ, ಶಾರದಾ ವಿದ್ಯಾಲಯ ಉಪಪ್ರಾಂಶುಪಾಲ ದಯಾನಂದ ಕಟೀಲ್ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.