ಹಮಾಲಿಗಳ ಅನುಕೂಲಕ್ಕೆ ರೈಲ್ವೆ ಲಗೇಜ್ ಟ್ರಾಲಿ

7

ಹಮಾಲಿಗಳ ಅನುಕೂಲಕ್ಕೆ ರೈಲ್ವೆ ಲಗೇಜ್ ಟ್ರಾಲಿ

Published:
Updated:
ಹಮಾಲಿಗಳ ಅನುಕೂಲಕ್ಕೆ ರೈಲ್ವೆ ಲಗೇಜ್ ಟ್ರಾಲಿ

ಬೆಂಗಳೂರು: ಅಂಗವಿಕಲ ಮತ್ತು ಹಿರಿಯ ಪ್ರಯಾಣಿಕರ ಅನುಕೂಲಕ್ಕಾಗಿ ಐದು ವರ್ಷಗಳ ಹಿಂದೆಯೇ ಬ್ಯಾಟರಿ ಚಾಲಿತ ಹಗುರ ಗಾಡಿಯನ್ನು ಪರಿಚಯಿಸಿದ್ದ ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗ ಇದೀಗ ಮತ್ತೊಂದು ಪ್ರಥಮವನ್ನು ಸಾಧಿಸಿದೆ.ಪ್ರಯಾಣಿಕರ ಲಗೇಜುಗಳನ್ನು ತಲೆ ಮೇಲೆ ಮತ್ತು ಎರಡೂ ಕೈಗಳಲ್ಲಿ ಹೊತ್ತು ಸಾಗುತ್ತಿದ್ದ ರೈಲ್ವೆ ಹಮಾಲಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕೈಯಲ್ಲೇ ನಿಯಂತ್ರಿಸಬಹುದಾದ ರೈಲ್ವೆ ಲಗೇಜ್ ಟ್ರಾಲಿಯನ್ನು ಮಂಗಳವಾರದಿಂದಲೇ ಪರಿಚಯಿಸಲಾಗಿದ್ದು, ಲೈಸೆನ್ಸ್ ಹೊಂದಿರುವ ಹಮಾಲಿಗಳಿಗೆ ಆರಂಭದಲ್ಲಿ 40 ಟ್ರಾಲಿಗಳನ್ನು ಒದಗಿಸಲಾಗುತ್ತಿದೆ.

 

ಪ್ರಯಾಣಿಕರು ಈ ಟ್ರಾಲಿಯಲ್ಲಿ ತಮ್ಮ ಸಾಮಾನುಗಳನ್ನು ಸಾಗಿಸಲು ಇಲಾಖೆ ನಿಗದಿಪಡಿಸಿದ ಶುಲ್ಕವನ್ನು ನೀಡಬೇಕಾಗುತ್ತದೆ. ಮಧ್ಯಮ ಪ್ರಮಾಣದ ಭಾರವನ್ನು ಹೊರಬಲ್ಲ ಈ ಟ್ರಾಲಿಗಳು ಹಮಾಲಿಗಳ ಶ್ರಮವನ್ನು ಕಡಿಮೆಗೊಳಿಸುವಲ್ಲಿ ಸಹಾಯಕವಾಗಲಿದೆ. ಅವರ ಜೀವನಕ್ಕೂ ಆಧಾರವಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry