ಹರಪನಹಳ್ಳಿ : 23ರಿಂದ ಪಂಚಕಲ್ಯಾಣ ಮಹೋತ್ಸವ

7

ಹರಪನಹಳ್ಳಿ : 23ರಿಂದ ಪಂಚಕಲ್ಯಾಣ ಮಹೋತ್ಸವ

Published:
Updated:

ದಾವಣಗೆರೆ: ಜಿಲ್ಲೆಯ ಹರಪನಹಳ್ಳಿಯ ಆದಿನಾಥ ತೀರ್ಥಂಕರ ತ್ರಿಕೂಟ ಚೂಡಾಮಣಿ ದಿಗಂಬರ ಜೈನ ಮಂದಿರದಲ್ಲಿ ಫೆ. 23ರಿಂದ 27ರವರೆಗೆ  `ಪಂಚಕಲ್ಯಾಣ ಪೂಜಾ ಮಹೋತ್ಸವ~ ಆಯೋಜಿಸಲಾಗಿದೆ.ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ನೂತನ ಜಿನಬಿಂಬಗಳ ಹಾಗೂ ನೂತನ ಮಾನಸ್ಥಂಭೋಪರಿ ಚತುರ್ಮುಖ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಆಯೋಜಿಸಲಾಗಿದೆ. ಫೆ. 23ರಂದು ಬೆಳಿಗ್ಗೆ 11ಕ್ಕೆ `ಗರ್ಭಾವತರಣ ಕಲ್ಯಾಣ ಮಹೋತ್ಸವ~ ಕಾರ್ಯಕ್ರಮವಿದೆ. ನಂತರ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪೂಜಾ ಮಹೋತ್ಸವವನ್ನು ಹರಪನಹಳ್ಳಿ ತೆಗ್ಗಿನಮಠದ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. 24ರಂದು ಸಂಜೆ 6ಕ್ಕೆ `ಜನ್ಮಕಲ್ಯಾಣ ಮಹೋತ್ಸವ~ ನಡೆಯಲಿದೆ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ, ಮೂಡಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. 25ರಂದು ಸಂಜೆ 6ಕ್ಕೆ ಧಾರ್ಮಿಕ ಸಭೆ, `ದೀಕ್ಷಾ ಕಲ್ಯಾಣ~ ಕಾರ್ಯಕ್ರಮ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry