ಹರಳಹಳ್ಳಿ ಸಮುದಾಯ ಭವನಕ್ಕೆ 3 ಲಕ್ಷ

7

ಹರಳಹಳ್ಳಿ ಸಮುದಾಯ ಭವನಕ್ಕೆ 3 ಲಕ್ಷ

Published:
Updated:

ಜಾವಗಲ್: ಹರಳಹಳ್ಳಿ ಗ್ರಾಮದ ಸಮುದಾಯ ಭವನಕ್ಕೆ ರೂ. 3 ಲಕ್ಷ ನೀಡುವುದಾಗಿ ಶಾಸಕ ರುದ್ರೇಶಗೌಡ ತಿಳಿಸಿದರು.

ಸೋಮವಾರ ಹರಳಹಳ್ಳಿ ಗ್ರಾಮದ ಮಾರುತಿ ದೇವಾಲಯದ ಉದ್ಘಾಟನೆ ಮತ್ತು ಶಿಖರ ಕಳಸ ಸ್ಥಾಪನೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ ದೇವಾಲಯಕ್ಕೆ ಕಳಸಾರೋಹಣ ನೆರವೇರಿಸಿದರು.

ಸಮಾರಂಭದಲ್ಲಿ ಕಾಗಿನೆಲೆ ಗುರು ಪೀಠದ ಶಿವಾನಂದಪುರಿ ಮಹಾ ಸ್ವಾಮಿಜಿ, ಪುಷ್ಪಗಿರಿ ಸೋಮಶೇಖರ ಸ್ವಾಮಿಜಿ, ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ, ಶಿವಪುತ್ರಸ್ವಾಮಿಜಿ, ಬಸವಲಿಂಗ ಸ್ವಾಮಿಜಿ, ಶಾಸಕ ಶಿವಲಿಂಗೇಗೌಡ, ಮಾಜಿ ರಾಜ್ಯಸಭಾ ಸದಸ್ಯ ಜವರೇಗೌಡ, ವಿಧಾನಸಭಾ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ, ಹುಚ್ಚೇಗೌಡ, ಬಿಳಿಚೌಡಯ್ಯ, ಹೇಮಾ ವತಿ, ತಾ.ಪಂ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಶಿವಮೂರ್ತಿ ಎಪಿಎಂಸಿ ಅಧ್ಯಕ್ಷ ಅಶೋಕ್ ಎಪಿಎಂಸಿ ಸದಸ್ಯ ವೆಂಕಟೇಶ್, ಕೆಪಿಸಿಸಿಐ ಸದಸ್ಯ ಗೊಲ್ಲರಹಳ್ಳಿ ಶಿವಪ್ಪ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ್ ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಲತಾ ನಂಜುಂಡಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry