ಹರಾಜು: ರೂ 7.88 ಲಕ್ಷ ಸಂಗ್ರಹ

7

ಹರಾಜು: ರೂ 7.88 ಲಕ್ಷ ಸಂಗ್ರಹ

Published:
Updated:
ಹರಾಜು: ರೂ 7.88 ಲಕ್ಷ ಸಂಗ್ರಹ

ಚಿತ್ರದುರ್ಗ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಶುಕ್ರವಾರ ಹಳೇ ವಾಹನಗಳ ಹರಾಜಿನಿಂದ ್ಙ 7.88 ಲಕ್ಷ ಸಂಗ್ರಹವಾಯಿತು.

ಬುಲೆಟ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ್ಙ 30ರಿಂದ ್ಙ 59 ಸಾವಿರವರೆಗೆ ಬುಲೆಟ್ ವಾಹನಗಳ ಮಾರಾಟವಾದವು.ಹರಾಜು ಪ್ರಕ್ರಿಯೆ ಸಭೆಯಲ್ಲಿ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳ 250 ಬಿಡ್‌ದಾರರು ಪಾಲ್ಗೊಂಡಿದ್ದರು.

ಒಟ್ಟು 21 ವಾಹನಗಳಲ್ಲಿ 5 ಬುಲೆಟ್, 13 ಪೊಲೀಸ್ ಜೀಪು, 3 ಮಿನಿ ಬಸ್‌ಗಾಗಿ ಹರಾಜು ನಡೆಯಿತು. ಈ ಎಲ್ಲ ವಾಹನಗಳಿಂದ ್ಙ 7.88 ಲಕ್ಷ  ಸಂಗ್ರಹವಾಗಿದೆ. ಸಾರಿಗೆ ಇಲಾಖೆ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ದರದಲ್ಲಿ ವಾಹನಗಳು ಮಾರಾಟವಾಗಿರುವುದು ವಿಶೇಷ.ಹರಾಜಿನಲ್ಲಿ ಪಡೆದ ವಾಹನಗಳ ಹಣ ತುಂಬಿಸಿಕೊಂಡು ಒಂದು ವಾರದಲ್ಲಿ ಮಾಲೀಕರಿಗೆ ದಾಖಲೆ ಸಮೇತ ವಾಹನಗಳನ್ನು ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ಶಿವರುದ್ರಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry