ಬುಧವಾರ, ಮೇ 25, 2022
31 °C

ಹರಿಪುರದಲ್ಲಿ ನೂತನ ರಥ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಅಧ್ಯಾತ್ಮದಿಂದ ಮಾತ್ರ ಮನುಷ್ಯ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯ. ನಿತ್ಯದ ಯಾಂತ್ರಿಕ ಬದುಕಿನಲ್ಲಿ ಒಂದಿಷ್ಟು ಸಮಯವನ್ನು  ಭಗವಂತನ ಸ್ಮರಣೆಗೆ   ಮೀಸಲಿಡಬೇಕು. ಇದರಿಂದ ಮನಸ್ಸು ಪರಿಪಕ್ವಗೊಳ್ಳುತ್ತದೆ ಎಂದು  ಸಿದ್ಧರಾಮ ಶ್ರೀಗಳು ಹೇಳಿದರು. ಇಲ್ಲಿಗೆ ಸಮೀಪದ ಹರಿಪುರ ಗ್ರಾಮದ ಜಡೆ ಶಂಕರಲಿಂಗೇಶ್ವರ ದೇವಸ್ಥಾನದ ನೂತನ ರಥವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ತಾತ್ವಿಕ ವಿಚಾರಗಳು, ಜಾತ್ಯತೀತ ಭಾವನೆ, ಸಾಮಾಜಿಕ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು. ಈ ಮೂಲಕ ಸನ್ಮಾರ್ಗದತ್ತ ಸಾಗಬೇಕು ಎಂದರು.ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಶರಣರ ತತ್ವ ಹಾಗೂ ಆದರ್ಶ ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು. ಶಿಕ್ಷಣ ಸಂಯೋಜಕ ಕೆ.ಎ. ಬಳಿಗೇರ  ಉಪನ್ಯಾಸ ನೀಡಿದರು.   ಪಂಚಾಕ್ಷರಯ್ಯ ಶಿವಾಚಾರ್ಯ ಸ್ವಾಮೀಜಿ, ಪಟ್ಟಣ ಪಂಚಾಯ್ತಿ ಸದಸ್ಯ ಶ್ರೀಶೈಲಪ್ಪ ಮಣ್ಣೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಚ್.ಡಿ. ಮಾಗಡಿ, ಸಿಸಿಎನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ಚನ್ನಪ್ಪ ಕಾಳಗಿ, ನಿಂಗಪ್ಪ ತುಳಿ, ಮಂಜುನಾಥ ಮೊರಬದ, ಮಹಾಂತೇಶ ಕಲ್ಮಠ, ಎಂ.ಎಚ್. ತಿಪ್ಪಾರೆಡ್ಡಿ, ಷಣ್ಮುಖಪ್ಪ ಪಾಟೀಲ ಉಪಸ್ಥಿತರಿದ್ದರು. ಐ.ಬಿ. ದೇಸಾಯಿಪಟ್ಟಿ ಸ್ವಾಗತಿಸಿದರು. ಸಿ.ಪಿ. ಕಾಳಗಿ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.