ಮಂಗಳವಾರ, ಅಕ್ಟೋಬರ್ 15, 2019
26 °C

ಹರಿಯಾಣಕ್ಕೆ ಆರಂಭಿಕ ಆಘಾತ

Published:
Updated:

ರೋಹತಕ್ (ಪಿಟಿಐ): ಮೊದಲ ಇನಿಂಗ್ಸ್‌ನಲ್ಲಿ ಹರಿಯಾಣ ತಂಡದವರು ಮೇಲುಗೈ ಸಾಧಿಸಿದರೂ, ಇಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಟೂರ್ನಿಯ ರಾಜಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದ್ದಾರೆ.

ಇಲ್ಲಿನ ಬನ್ಸಿಲಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಹರಿಯಾಣ ಮೊದಲ ಇನಿಂಗ್ಸ್‌ನಲ್ಲಿ 47.5 ಓವರ್‌ಗಳಲ್ಲಿ 97 ರನ್ ಗಳಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಪ್ರವಾಸಿ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 200 ರನ್‌ಗಳ ಗಡಿ ಮಟ್ಟಲು ಸಾಧ್ಯವಾಗಲಿಲ್ಲ. 68.5 ಓವರ್‌ಗಳಲ್ಲಿ ಈ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು.

ಈ ಅಲ್ಪ ಮೊತ್ತದ ಗುರಿ ಆತಿಥೇಯರಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ, ಎರಡನೇ ದಿನವಾದ ಬುಧವಾರದ ಅಂತ್ಯಕ್ಕೆ ಈ ತಂಡ 7 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 15 ರನ್ ಗಳಿಸಿದೆ.

ಮುಂಬೈ ವರದಿ: ರಾಮಸ್ವಾಮಿ ಪ್ರಸನ್ನ (104, 232 ಎಸೆತ, 17ಬೌಂಡರಿ) ಹಾಗೂ ವಿಜಯ ಕುಮಾರ್ ಮಹೇಶ್ (67, 259ಎಸೆತ, 4ಬೌಂ, 2ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ತಂಡ ಮುಂಬೈ ವಿರುದ್ಧದ ನಾಲ್ಕರ ಘಟ್ಟದ ರಣಜಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರು:  ರಾಜಸ್ತಾನ: 36.1 ಓವರ್‌ಗಳಲ್ಲಿ 89 ಹಾಗೂ ಎರಡನೇ ಇನಿಂಗ್ಸ್ 68.5 ಓವರ್‌ಗಳಲ್ಲಿ 192. (ವಿನತ್ ಸೆಕ್ಸೆನಾ 58, ರಾಬಿನ್ ಬಿಷ್ಟ್ 44; ಹರ್ಷಲ್ ಪಟೇಲ್ 45ಕ್ಕೆ2, ಸಚಿನ್ ರಾಣಾ 26ಕ್ಕೆ4, ಅಮಿತ್ ಮಿಶ್ರಾ 38ಕ್ಕೆ2). ಹರಿಯಾಣ: 47.5  ಓವರ್‌ಗಳಲ್ಲಿ 97 ಹಾಗೂ ದ್ವಿತೀಯ ಇನಿಂಗ್ಸ್ 7 ಓವರ್‌ಗಳಲ್ಲಿ 2 ವಿಕೆಟ್‌ಗೆ 15. (ನಿತಿನ್ ಸೈನಿ 9, ಹರ್ಷಲ್ ಪಟೇಲ್ ಬ್ಯಾಟಿಂಗ್ 1, ರಿತುರಾಜ್ ಸಿಂಗ್ 11ಕ್ಕೆ1).

ತಮಿಳುನಾಡು 136. 1 ಓವರ್‌ಗಳಲ್ಲಿ 359. (ಆರ್. ಪ್ರಸನ್ನ 104, ವಿ.ವೈ. ಮಹೇಶ್ 67; ಧವಳ್ ಕುಲಕರ್ಣಿ 60ಕ್ಕೆ2, ಬಲ್ವಿಂದರ್ ಸಂಧು 88ಕ್ಕೆ5), ಮುಂಬೈ 38 ಓವರ್‌ಗಳಲ್ಲಿ 6 ವಿಕೆಟ್‌ಗೆ 121. (ಸೂರ್ಯಕುಮಾರ್ ಯಾದವ್ 52, ಹಿಕೆನ್ ಶಹಾ ಬ್ಯಾಟಿಂಗ್ 21; ಲಕ್ಷ್ಮೀಪತಿ ಬಾಲಾಜಿ 16ಕ್ಕೆ3).

Post Comments (+)