ಗುರುವಾರ , ಅಕ್ಟೋಬರ್ 17, 2019
26 °C

ಹರಿಯಾಣಕ್ಕೆ ಶರಣಾದ ಕರ್ನಾಟಕ ತಂಡ

Published:
Updated:

ರಾಯ್‌ಪುರ (ಪಿಟಿಐ): ಕರ್ನಾಟಕ ಪುರುಷರ ತಂಡ ಇಲ್ಲಿ ನಡೆಯುತ್ತಿರುವ 60ನೇ ರಾಷ್ಟ್ರೀಯ ಸೀನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸೋಲು ಅನುಭವಿಸಿತು.ಛತ್ತೀಸ್‌ಗಡದ ರಾಯ್‌ಪುರದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹರಿಯಾಣ 25-18, 25-23, 20-25, 22-25, 15-09 ರಲ್ಲಿ ಕರ್ನಾಟಕ ವಿರುದ್ಧ ಜಯ ಸಾಧಿಸಿತು.ಮೊದಲ ಎರಡು ಸೆಟ್‌ಗಳಲ್ಲಿ ಸೋಲು ಅನುಭವಿಸಿದ ಕರ್ನಾಟಕ ಬಳಿಕ ಮರುಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ.ಹಿಮಾಚಲ ಪ್ರದೇಶ ತಂಡದವರು ಪುರುಷರ ಮತ್ತು ಮಹಿಳಾ ವಿಭಾಗದ ಪಂದ್ಯದಲ್ಲಿ ಜಯಗಳಿಸಿ ಮುನ್ನಡೆದಿದ್ದಾರೆ. ಪುರುಷರ ವಿಭಾಗದ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡ 26-24, 25-22, 25-22 (3-0) ರಲ್ಲಿ ಮಹಾರಾಷ್ಟ್ರ ಮೇಲೂ, ಮಹಿಳಾ ವಿಭಾಗದಲ್ಲಿ 21-15, 32-30, 25-18, 25-19 (3-1) ರಲ್ಲಿ ತಮಿಳುನಾಡು ವಿರುದ್ಧವೂ ಜಯಗಳಿಸಿತು.ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಚಂಡೀಗಡ ತಂಡ 25-19, 25-20, 25-17 (3-0) ರಲ್ಲಿ ಗುಜರಾತ್ ಮೇಲೂ, ರಾಜಾಸ್ತಾನ ತಂಡ 25-18, 25-15, 25-17 (3-0) ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧವೂ ಗೆಲುವು ಸಾಧಿಸಿತು.ಮಹಿಳಾ ವಿಭಾಗದ ಪಂದ್ಯಗಳಲ್ಲಿ ಮಧ್ಯ ಪ್ರದೇಶ ತಂಡದವರು 3-0 ರಲ್ಲಿ ಚಂಡೀಗಢ ಮೇಲೂ, ಜಾರ್ಖಂಡ್ ತಂಡದವರು 3-0 ರಲ್ಲಿ ರಾಜಾಸ್ತಾನ ವಿರುದ್ಧವೂ, ಒಡಿಸಾ ತಂಡದವರು 3-1 ರಲ್ಲಿ ಹರ್ಯಾಣ ಮೇಲೂ ಜಯ ಪಡೆದರು.

Post Comments (+)