ಶುಕ್ರವಾರ, ಮೇ 7, 2021
19 °C

ಹರಿಹರ ಪಲ್ಲತ್ತಡ್ಕ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಶಾಲಾ ಕಾಲೇಜುಗಳು ಆರಂಭಗೊಂಡು ಪಾಠ ಪ್ರವಚನಗಳು ಆರಂಭವಾಗಿವೆ. ಪಾಠ ಕೇಳುವುದಕ್ಕೆ ಮಕ್ಕಳು ಸಿದ್ಧರಿದ್ದಾರೆ. ಆದರೆ ಹೇಳುವುದಕ್ಕೆ ಶಿಕ್ಷಕರೇ ಇಲ್ಲ. ಇಂತಹ ಸಮಸ್ಯೆ ಹರಿಹರ ಪಲ್ಲತ್ತಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ಎದುರಾಗಿದೆ. ಶಿಕ್ಷಕರಿಲ್ಲದೆ ಮಕ್ಕಳು ಚಿಂತೆಯಲ್ಲಿದ್ದರೆ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.ಈ ಪ್ರೌಢಶಾಲೆಯಲ್ಲಿ ಒಟ್ಟು 77 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಾರೀರಿಕ ಶಿಕ್ಷಣ ಶಿಕ್ಷಕರನ್ನು ಹೊರತು ಪಡಿಸಿ ಉಳಿದ 6 ಅಧ್ಯಾಪಕರ ಹುದ್ದೆ ಖಾಲಿ ಇವೆ. ದ್ವಿತೀಯ ದರ್ಜೆಯ ಗುಮಾಸ್ತರ 2 ಹುದ್ದೆ ಹಾಗೂ ವೃತ್ತಿ (ಹೊಲಿಗೆ) ಹುದ್ದೆಗಳು ಖಾಲಿ ಬಿದ್ದಿವೆ. ಶಾರೀರಿಕ ಶಿಕ್ಷಕರೇ ಶಾಲೆಯ ಉಸ್ತುವಾರಿಯ ಹೊಣೆಯನ್ನು ಹೊರಬೇಕಿದೆ.2009ರಿಂದಲೇ ಈ ಶಾಲೆಗಳ ಕೆಲವು ಹುದ್ದೆಗಳು ಖಾಲಿಯಾಗಿವೆ. ನಂತರದ ದಿನಗಳಲ್ಲಿ ಇದ್ದ ಶಿಕ್ಷಕರು ವರ್ಗಾವಣೆ ಹಾಗೂ ನಿವೃತ್ತಿಗೊಂಡು ಶಿಕ್ಷಕರ ಸಂಖ್ಯೆ ಕ್ಷೀಣಿಸಿ ಸಮಸ್ಯೆ ತೀವ್ರಗೊಂಡಿದೆ. ಈ ಹಿಂದೆ ಇದ್ದ ಹಿರಿಯ ಸಹಶಿಕ್ಷಕರೊಬ್ಬರು ಶಿಕ್ಷಣ ಸಂಯೋಜಕರಾಗಿ ಬಡ್ತಿ ಹೊಂದಿದ್ದಾರೆ. ಹಿರಿಯ ಸಹಶಿಕ್ಷಕರಾದ ಪ್ಯಾರೇಜಾನ್ ಎಂಬವರು ಮೇ 30ರಂದು ವಯೋನಿವೃತ್ತಿ ಹೊಂದಿದ ಮೇಲೆ ಎಲ್ಲಾ ಹುದ್ದೆಗಳು ಖಾಲಿಯಾಗಿವೆ.ಗಣಿತ, ಹಿಂದಿ, ಕನ್ನಡ, ವಿಜ್ಞಾನ, ಕಲಾ ವಿಭಾಗ ಈ ಪ್ರಮುಖ ವಿಷಯಗಳ ಭೋಧನೆಗೆ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯೊಲೆಯಲ್ಲಿದೆ.ಅತಿಥಿ ಶಿಕ್ಷಕರ ನೆಲೆಯಲ್ಲಿ 2 ಮಂದಿ ಕರ್ತವ್ಯದಲ್ಲಿದ್ದಾರೆ. ಇದು ತಾತ್ಕಾಲಿಕ ಜೊತೆಗೆ ಕೊಲ್ಲಮೊಗ್ರು ಅನುದಾನಿತ ಪ್ರೌಡಶಾಲೆಯಿಂದ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸಿದ್ದರು ಶಾಶ್ವತ ಪರಿಹಾರ ಇಲ್ಲದ ಕಾರಣ ಇಲ್ಲಿಗೆ ಪೂರ್ಣಾವಾಧಿಯ ಕಾಯಂ ಶಿಕ್ಷಕರ ನೇಮಕವಾಗದ ವಿನಃ ಸಮಸ್ಯೆ ಬಗೆಹರಿಯುವುದು ಕಷ್ಟ ಎಂದು ಪೋಷಕರು ಹೇಳುತ್ತಾರೆ.ಇಲ್ಲಿ ಸರಿಯಾದ ಅಧ್ಯಾಪಕರ ವ್ಯವಸ್ಥೆ ಇಲ್ಲದಿರುವುದರಿಂದ ಅಸಮಮಾಧಾನಗೊಂಡ ಪೋಷಕರು ಶನಿವಾರ ಸಭೆ ಕರೆದಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.