ಭಾನುವಾರ, ಮೇ 16, 2021
22 °C

ಹರ್ಷ ತಂದ ಆಲಿಕಲ್ಲು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಗೋಳ: ತಾಲ್ಲೂಕಿನಲ್ಲಿ ಬೇಸಿಗೆಯ ಪ್ರಥಮ ಆಲಿಕಲ್ಲು ಮಳೆ ಬುಧವಾರ ಸುರಿದಿದೆ. ಇಳೆಗೆ ತಂಪು ಸುರಿದ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ. ಸಂಜೆ ಬೀಸಿದ ಗಾಳಿಯ ಜೊತೆ ಸುರಿದ  ಮಳೆ ಆಲಿಕಲ್ಲುಗಳನ್ನು ಸಹ ಬೀಳಿಸಿತು. ದಿಢೀರ್ ಮಳೆಯಿಂದಾಗಿ ವಿದ್ಯುತ್ ಕಡಿತಗೊಂಡಿತು. ಅಲ್ಲಲ್ಲಿ ತಗಡು ಸೀಟುಗಳು ಗಾಳಿಯ ಹೊಡೆತಕ್ಕೆ ಹಾರಿ ಹೋಗಿವೆ. ಸಂತೆಗೆ ಬಂದಿದ್ದ ವ್ಯಾಪಾರಿಗಳು ಮತ್ತು ಗ್ರಾಹಕರು ತೀವ್ರ ತೊಂದರೆ ಅನುಭವಿಸಿದರು. ಒಂದು ಗಂಟೆ ಮಳೆ ಸುರಿದ ಪರಿಣಾಮಚರಂಡಿಗಳು ತುಂಬಿ ಹರಿದಿವೆ. ಹರಗಿ ಬಿಟ್ಟಿದ್ದ ಹೊಲಗಳು ತೇವವಾಗಿವೆ. ಗಾಳಿ-ಮಳೆಯಿಂದಾಗಿ ಬಸ್ ಸಂಚಾರ ಕೆಲಕಾಲ ಸ್ಥಗಿತಗೊಂಡಿತು. ಶಾಲೆಗೆ ರಜೆ ಸಿಕ್ಕಿ ಖುಷಿಯಲ್ಲಿದ್ದ ಮಕ್ಕಳಂತೂ ಆಲಿಕಲ್ಲುಗಳನ್ನು ಹೆಕ್ಕಲು ಹಾತೊರೆದರು, ಮಳೆಯ ಜೊತೆ ಆಟವಾಡಿ ಹರ್ಷ ವ್ಯಕ್ತಪಡಿಸಿದರು. ಕೆಲವರಂತೂ ಮಳೆಯಿಂದ ತೊಯಿಸಿಕೊಂಡರೂ ಚಿಂತೆಯಿಲ್ಲ ಎಂದುಕೊಂಡು ಮನೆಗಳಿಂದ ಹೊರಬಂದು ಆಲಿಕಲ್ಲುಗಳನ್ನು ಹಿಡಿದು ತಿಂದು ಆನಂದಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.