ಭಾನುವಾರ, ಮೇ 16, 2021
22 °C

ಹಲವೆಡೆ ಆಲಿಕಲ್ಲು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಜಾಪುರ ಜಿಲ್ಲೆಯ ತಾಳಿಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಂಗಳವಾರ ಆಲಿಕಲ್ಲು ಸಮೇತ ಮಳೆಯಾಗಿದೆ.ತಾಳಿಕೋಟೆ ಪಟ್ಟಣದಲ್ಲಿ ಮಂಗಳವಾರ ಸುಮಾರು 15 ನಿಮಿಷ ಆಲಿಕಲ್ಲು ಸಮೇತ ಮಳೆಯಾಗಿದೆ.

ಆಲಿಕಲ್ಲು ಆರಿಸಿಕೊಳ್ಳಲು ಮಕ್ಕಳು-ಹಿರಿಯರೆನ್ನದೆ ಎಲ್ಲರೂ ಅಂಗಳಕ್ಕಿಳಿದ ದೃಶ್ಯ ಸಾಮಾನ್ಯವಾಗಿತ್ತು. ವಿಜಾಪುರ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸುಮಾರು ಅರ್ಧ ತಾಸು ಆಲಿಕಲ್ಲು ಬಿದ್ದಿದ್ದು, ಸುಮಾರು ಒಂದು ತಾಸು ಮಳೆಯಾಗಿದೆ. ಇದಲ್ಲದೆ ಬೆಳಗಾವಿ ನಗರ, ಧಾರವಾಡ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಸಹ ತುಂತುರು ಮಳೆಯಾದ ವರದಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.