ಹಲಸಂಗಿಯಲ್ಲಿ ಗಡಿನಾಡ ಉತ್ಸವ ಇಂದಿನಿಂದ

7

ಹಲಸಂಗಿಯಲ್ಲಿ ಗಡಿನಾಡ ಉತ್ಸವ ಇಂದಿನಿಂದ

Published:
Updated:

ಇಂಡಿ: ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ಫೆ. 26 ಮತ್ತು 27 ರಂದು ಗಡಿನಾಡ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿಜಾಪೂರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ ವಾಲಿ ತಿಳಿಸಿದ್ದಾರೆ.26 ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಗಡಿನಾಡ ಉತ್ಸವ ಉದ್ಘಾಟಿಸುವರು. ಶಾಸಕ ವಿಠ್ಠಲ ಕಟಕಧೋಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಂ.ಬಿ.ಪಾಟೀಲ, ರಮೇಶ ಭೂಸನೂರ, ಎ.ಎಸ್.ಪಾಟೀಲ ನಡಹಳ್ಳಿ, ಸಿ.ಎಸ್.ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಜಿ.ಎಸ್.ನ್ಯಾಮಗೌಡ, ಎಸ್.ಆರ್.ಪಾಟೀಲ, ಮಹಾಂತೇಶ ಕೌಜಲಗಿ, ಅರುಣ ಶಹಾಪೂರ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಕೋಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬೌರಮ್ಮ ಬಸಪ್ಪ ಮುಳಜಿ, ಉಪಾಧ್ಯಕ್ಷೆ ದುಂಡಮ್ಮ ನಾಗಪ್ಪ ಹೂಗಾರ, ತಾ,ಪಂ ಸದಸ್ಯ ಸುಭಾಸ ಕಟ್ಟೀಮನಿ, ಗ್ರಾ, ಪಂ, ಅಧ್ಯಕ್ಷೆ ಹುಸೆನಬಿ ಶಿಗನಳ್ಳಿ, ಉಪಾಧ್ಯಕ್ಷೆ ಕಸ್ತೂರಿ ದೇಗಾಂವ, ಹಾಗೂ ಸದಸ್ಯರು ಆಗಮಿಸಲಿದ್ದಾರೆ.ಬೃಹತ್ ಮೆರವಣಿಗೆ: ಗಡಿನಾಡ ಉತ್ಸವದ ನಿಮಿತ್ತ  ಶನಿವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದಲ್ಲಿ ಬೃಹತ್ ಮೆರವಣಿಗೆ ಮಾಡಲಾಗುವುದು. ಈ ಮೆರವಣಿಗೆಯಲ್ಲಿ ದಯಾನಂದ ಹಾವಡಿ ಅವರ ಕರಡಿ ಮಜಲು, ಪ್ರಭು ಜಿಗಜಿಣಗಿ ಅವರ ಹೆಜ್ಜೆ ಮೇಳ, ಈಶ್ವರಪ್ಪ ಮಾದರ ಅವರ ಕುದುರೆ ಕುಣಿತ, ವೀರಭದ್ರೇಶ್ವರ ಭಜನಾ ತಂಡದವರಿಂದ ಭಜನೆ, ಭೀಮಣ್ಣ ಪೂಜಾರಿ ಅವರಿಂದ ಡೊಳ್ಳುವಾದ್ಯ, ಕಲಾಚೇತನ ಯುವ ಸಂಸ್ಥೆಯಿಂದ ಮುಖವಾಡ ತಂಡದ ಮೆರವಣಿಗೆ, ಕಾಳಿಂಗಪ್ಪ ಬಡಿಗೇರ ಅವರಿಂದ ಪುರವಂತಿಕೆ, ಸ್ಥಲೀಯ ಕಲಾವಿದರಿಂದ ಜಾನಪದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.ಫೆ. 27 ರಂದು ಬೆಳಿಗ್ಗೆ 10 ಗಂಟೆಗೆ ವಿಚಾರಗೋಷ್ಠಿ ಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ ಉದ್ಘಾಟಿಸುವರು. ಪ್ರಾಚಾರ್ಯ ಎ.ಎಸ್.ಕಂಚಾಯಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಸುರೇಶ ಚೋಳಕೆ ಆಗಮಿಸಲಿದ್ದಾರೆ.ಡಾ, ಎಂ.ಎಸ್.ಮಧುಬಾವಿ, ಡಾ, ಎಸ್.ಕೆ. ಕೊಪ್ಪಾ ಉಪನ್ಯಾಸ ನೀಡುವರು. ಮಧ್ಯಾಹ್ನ ಗೋಷ್ಠಿ 2 ರಲ್ಲಿ ಡಾ, ಎಂ.ಎಸ್.ವಾಲಿ ಅವರ ಅಧ್ಯಕ್ಷತೆಯಲ್ಲಿ ಡಾ, ಮಲ್ಲಿಕಾರ್ಜುನ ಮೇತ್ರಿ, ಡಾ, ಕಾಂತು ಇಂಡಿ, ಪ್ರೊ.ಮಹಾದೇವ ರೆಬಿನಾಳ   ಉಪನ್ಯಾಸ ನೀಡುವರು. 3.30 ಗಂಟೆ ಕವಿಗೋಷ್ಠಿಯನ್ನು ಡಾ, ಡಿ.ಸಿ.ರಾಜಪ್ಪ ಉದ್ಘಾಟಿಸಲಿದ್ದಾರೆ. ಡಿಎಸ್‌ಪಿ ಎಂ. ಮುತ್ತುರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಎಂ.ಪಟಶೆಟ್ಟಿ, ಶಂಕರ ಬೈಚಬಾಳ ಆಗಮಿಸಲಿದ್ದಾರೆ. 18 ಜನ ಕವಿಗಳು ತಮ್ಮ ಕವನ ವಾಚಿಸುವರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry