ಸೋಮವಾರ, ಮೇ 17, 2021
23 °C

ಹಲಸಿನ ಬಗ್ಗೆ ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಋತುಮಾನ ಬೆಳೆಗಳಾದ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಹಾಗೂ ಈ ಹಣ್ಣುಗಳ ವಿವಿಧ ತಳಿಗಳ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆಯಿತು.ಹಲಸಿನ ಹಣ್ಣಿನಿಂದ ತಯಾರಿಸಿದ ಚಿಪ್ಸ್, ಕೇಸರಿಬಾತ್, ಪೂರಿ, ಇಡ್ಲಿ, ಬರ್ಫಿ, ಚಾಕ್ಲೇಟ್, ಹೋಳಿಗೆ, ಮುಲ್ಕ, ಕರಿದ ಹಲಸಿನ ಬೀಜ ಸೇರಿದಂತೆ ವೈವಿಧ್ಯಮಯ ರುಚಿಕರ ಖಾದ್ಯಗಳನ್ನು ಮಾರಾಟಕ್ಕೆ ಇಡಲಾಗಿತ್ತು.`ಚಂದ್ರ, ಏಕಾದಶಿ, ಬಂಗಾರ, ಮಲ್ಲಿಕಾ..' ಸೇರಿದಂತೆ ಬಗೆ ಬಗೆಯ ಹಲಸಿನ ತಳಿಗಳು ಗಮನ ಸೆಳೆದವು. ಕೆಲವು ಗ್ರಾಹಕರು, ಹಲಸಿನ ಖಾದ್ಯ ಮತ್ತು ಹಣ್ಣು ತಿಂದು ಬಾಯಿ ಚಪ್ಪರಿಸಿದರು.ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದ ಪ್ರಗತಿಪರ ಕೃಷಿಕ ಸೈಯದ್ ಘನಿಖಾನ್ ಅವರು, `ಮಂಗಮಾರಿ, ಲಾಲ್‌ಬಾದಮ್, ಬಡಾಗೋಲಾ, ಸೇಬ್ ಕ ಆಮ್, ಸೈದನ್ ಪಸಂದ, ಮಾಂಜೇಬಿ ಪಸಂದ್, ತಾಜ್‌ಮಹಲ್, ನರ್ಗಿಸ್ ಸೇರಿದಂತೆ 20ಕ್ಕೂ ಹೆಚ್ಚಿನ ತಳಿಯ ಮಾವಿನ ಕಾಯಿ, ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದರು.ತಾಲ್ಲೂಕಿನ ವಿ.ಸಿ.ಫಾರ್ಮ್ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೂಕ್ತ ಪ್ರಚಾರ ಇಲ್ಲದ್ದರಿಂದ ಹೆಚ್ಚಿನ ಗ್ರಾಹಕರು ಮತ್ತು ತೋಟಗಾರಿಕೆ ಬೆಳೆಗಾರರನ್ನು ಸೆಳೆಯುವಲ್ಲಿ ವಿಫಲವಾಯಿತು.ಕಾರ್ಯಕ್ರಮ ಉದ್ಘಾಟಿಸಿದ ವಿ.ಸಿ. ಫಾರ್ಮ್ ವಲಯ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಟಿ. ಶಿವಶಂಕರ್ ಮಾತನಾಡಿ, ಹಲಸಿನಲ್ಲಿ ಹಲವಾರು ತಳಿಗಳಿವೆ. ಉತ್ತಮ ಫಸಲು ನೀಡುತ್ತದೆ. ಆರ್ಥಿಕವಾಗಿಯೂ ಸಬಲರಾಗಬಹುದು ಎಂದರು.ಬೆಂಗಳೂರು ಕೃಷಿ ವಿವಿ ಸಹಪ್ರಾಧ್ಯಾಪಕಿ ಡಾ.ಎಸ್. ಶ್ಯಾಮಲಮ್ಮ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಟಿ. ಶಿವಶಂಕರ್, ವಿಷಯ ತಜ್ಞ ಡಾ.ಎಂ. ವೆಂಕಟೇಶ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.