ಹಲ್ಕಾವಟಗಿ ಗ್ರಾಮಸ್ಥರಿಂದ ಪ್ರತಿಭಟನೆ

7
‘ಅನ್ನಭಾಗ್ಯ’ದಲ್ಲಿ ಅಕ್ರಮದ ಆರೋಪ

ಹಲ್ಕಾವಟಗಿ ಗ್ರಾಮಸ್ಥರಿಂದ ಪ್ರತಿಭಟನೆ

Published:
Updated:

ಲಿಂಗಸುಗೂರ: ರಾಜ್ಯ ಸರ್ಕಾರದ ‘ಅನ್ನಭಾಗ್ಯ ಯೋಜನೆ’ಯ ಪಡಿತರವು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವೈಫಲ್ಯತೆಯಿಂದ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹಲ್ಕಾವಟಗಿ ಗಾ್ರಮಸ್ಥರು ತಹಸೀಲಾ್ದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಆರೇಳು ತಿಂಗಳಿಂದ ಪಡಿತರ ಕಾರ್ಡ್‌ ಸಮಸೆ್ಯ ನೆಪದಲ್ಲಿ ಆಹಾರ­ಧಾನ್ಯ ನೀಡಿಲ್ಲ. ಆದರೆ ಆಹಾರ ನಿಗಮದಿಂದ ಪಡಿತರವು ನೇರವಾಗಿ ಕಾಳಸಂತೆಗೆ ಹೋಗುತ್ತಿದೆ. ಜನತೆ  ಪರದಾಡುವಂತಾಗಿದೆ ಎಂದು ಆರೋಪಿಸಿದರು.ಆಹಾರ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಸ್ಪಂದಿಸುತ್ತಿಲ್ಲ.  ಸರ್ಕಾರವು ವಿಶೇಷ ತನಿಖೆ ನಡೆಸಿ ಪಡಿತರದಾರರಿಗೆ ನಾ್ಯಯ ಒದಗಿಸಬೇಕು ಎಂದು ಆಗ್ರಹಿಸಿದರು. ಗಾ್ರಮದ ಅಮರಗುಂಡಪ್ಪ ಅಂಗಡಿ, ಯಂಕಪ್ಪ ಗೌಂಡಿ, ಭೀಮಶೆಪ್ಪ, ಹುಲಗಮ್ಮ ತಳಗೇರಿ, ಸಂಗಮ್ಮ, ಶೆಟ್ಟೆಪ್ಪ, ಅಮರಪ್ಪ, ಶರಣಬಸಪ್ಪ ಕೋರಿ, ಮಲ್ಲಪ್ಪ, ಸಂಗನಗೌಡ, ದುರು­ಗಪ್ಪ, ಮಲ್ಲಿಕಾಜುರ್ನ, ಬಸಲಿಂಗಮ್ಮ, ಹುಲಿಗೆಮ್ಮ, ಬಸಮ್ಮ,ಯಮನಪ್ಪ, ಬಸವರಾಜ, ಹಸನಸಾಬ ಮತ್ತಿತರರು ಇದ್ದರು.ಕವಿಗೋಷ್ಠಿ ಇಂದು

ಕವಿತಾಳ
: ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದಿಂದ ಹೈದರಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಪಟ್ಟಣದ ಸಿಆರ್‌ಸಿ ಕಟ್ಟಡದಲ್ಲಿ ಸೆ.17ರಂದು ಸಂಜೆ 4ಗಂಟೆಗೆ ಕವಿಗೋಷ್ಠಿ ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry