ಶುಕ್ರವಾರ, ಮೇ 14, 2021
29 °C

ಹಲ್ಲೆ: ಆರೋಪಿಗಳು ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಾಜಿನಗರದಲ್ಲಿ ಶುಕ್ರವಾರ ರಾತ್ರಿ ಜುವೇರ್ ಪೈಲ್ವಾನ್ ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿ ತನ್ವೀರ್ ಮತ್ತು ಆತನ ಏಳು ಮಂದಿ ಸಹಚರರು ಪುಲಿಕೇಶಿನಗರ ಠಾಣೆಗೆ ಬಂದು ಶರಣಾಗಿದ್ದಾರೆ.ರೌಡಿ ತನ್ವೀರ್ ಅಹಮ್ಮದ್ (49) ಹಾಗೂ ಆತನ ಸಹಚರರಾದ ಇಸಾಕ್ (30), ಫಯಾಜ್ ಅಹಮ್ಮದ್(25), ಶಿರಾದ್ ಅಹಮ್ಮದ್ (26), ನದೀಂ ಷರೀಫ್ (24), ಇಮ್ತಿಯಾಜ್ (26), ಇರ್ಷಾದ್ (26) ಮತ್ತು ಪಾಸ್ಸಿ ಅಲಿಯಾಸ್ ಡಬಲ್ (25) ಎಂಬುವರು ಶುಕ್ರವಾರ ರಾತ್ರಿಯೇ ಠಾಣೆಗೆ ಬಂದು ಶರಣಾಗಿದ್ದಾರೆ. ಕೊಲೆಯತ್ನ ಆರೋಪದಡಿ (ಐಪಿಸಿ 307) ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಮುಂದಿನ ವಾರ ತನ್ವೀರ್‌ನ ಸಂಬಂಧಿಕರೊಬ್ಬರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ, ಮದುವೆಗೆ ಸ್ನೇಹಿತರನ್ನು ಆಹ್ವಾನಿಸಲು ತನ್ವೀರ್ ಹಾಗೂ ಆತನ ಸಹಚರರು ಶನಿವಾರ ರಾತ್ರಿ ಶಿವಾಜಿನಗರಕ್ಕೆ ಹೋಗಿದ್ದರು. ಈ ವೇಳೆ ಜುವೇರ್ ಪೈಲ್ವಾನ್ ಮತ್ತು ಅವರ ಸಹಚರರೊಂದಿಗೆ ಜಗಳವಾಗಿದ್ದು, ಆರೋಪಿಗಳು ಮಾರಕಾಸ್ತ್ರಗಳಿಂದ ಎದುರಾಳಿ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಜುವೇರ್ ಅವರ ಕೈ ತುಂಡಾಗಿದ್ದು, ಅವರ ನಾಲ್ಕು ಮಂದಿ ಸಹಚರರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಗಳನ್ನು ಬೆನ್ನಟ್ಟಿದ್ದರು. ಆದರೆ, ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿಗಳು ಒಂದು ತಾಸಿನ ನಂತರ ಠಾಣೆಗೆ ಬಂದು ಶರಣಾಗಿದ್ದಾರೆ.ಕುಖ್ಯಾತ ರೌಡಿ ಎಂದು ಗುರುತಿಸಿಕೊಂಡಿರುವ ತನ್ವೀರ್, 2001ರಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದು ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದ. 2003ರಲ್ಲಿ ಪುನಃ ನಗರಕ್ಕೆ ವಾಪಸಾದ ಆತ, ಸಹಚರರನ್ನು ಹೊಂದಿಸಿಕೊಂಡು ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ.ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ 2004ರಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.