ಹಲ್ಲೆ ಆರೋಪ ನಿರಾಕರಣೆ

7

ಹಲ್ಲೆ ಆರೋಪ ನಿರಾಕರಣೆ

Published:
Updated:

ಬೆಂಗಳೂರು: ‘ಗುತ್ತಿಗೆದಾರ ಕೆ. ಎನ್. ಜಗದೀಶ್ ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಿಲ್ಲ ಮತ್ತು ಲಂಚವನ್ನು ಸಹ ಕೇಳಿಲ್ಲ’ ಎಂದು ಬಿಬಿಎಂಪಿ ವಿದ್ಯಾರಣ್ಯಪುರ ವಾರ್ಡ್ ಸದಸ್ಯೆ ಕೆ.ನಂದಿನಿ ಶ್ರೀನಿವಾಸ್ ತಿಳಿಸಿದ್ದಾರೆ.‘ಜಗದೀಶ್ ತಮ್ಮ ವಾಣಿಜ್ಯ ಸಮುಚ್ಚಯದ ಮುಂಭಾಗದಲ್ಲಿ ನಿಯಮ ಉಲ್ಲಂಘಿಸಿ ಚರಂಡಿ ನಿರ್ಮಿಸಿಕೊಂಡಿದ್ದರು. ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚರಂಡಿ ತೆರವುಗೊಳಿಸಲು ಮುಂದಾಗಿದ್ದರು. ಆದರೆ ಜಗದೀಶ್ ಅವರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಬಗ್ಗೆ ಅಧಿಕಾರಿಗಳು ನನಗೆ ದೂರು ನೀಡಿ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು’ ಎಂದು ಅವರು ಹೇಳಿದ್ದಾರೆ.‘ಜಗದೀಶ್ ಅವರು ಬಿಬಿಎಂಪಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗೇಶ್ ಅವರು ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry