ಹಲ್ಲೆ ಆರೋಪ: ವಕೀಲರಿಂದ ಪ್ರತಿಭಟನೆ

7

ಹಲ್ಲೆ ಆರೋಪ: ವಕೀಲರಿಂದ ಪ್ರತಿಭಟನೆ

Published:
Updated:
ಹಲ್ಲೆ ಆರೋಪ: ವಕೀಲರಿಂದ ಪ್ರತಿಭಟನೆ

ಹುಬ್ಬಳ್ಳಿ: ಯುವ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವಕೀಲರು ಕಲಾಪಗಳನ್ನು ಬಹಿಷ್ಕರಿಸಿ, ಕೋರ್ಟ್‌ ವೃತ್ತದಲ್ಲಿ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು.ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿಯೂ ವಕೀಲರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಜನರು ಪರದಾಡುವಂತಾಯಿತು.'ಲಿಂಗರಾಜ ನಗರದಲ್ಲಿರುವ ವಿವಾದಿತ ಜಾಗೆಗೆ ವಕೀಲ ಸಂತೋಷ ಇವಣಿ ಭಾನುವಾರ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅವರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ’ ಎಂದು ಪ್ರತಿಭಟನಾ­ಕಾರರು ಆರೋಪಿಸಿದರು.’ಈ ಸಂಬಂಧ ದೂರು ದಾಖಲಿಸಿ­ಕೊಳ್ಳಲು ಪೊಲೀಸರು ವಿಳಂಬ ಮಾಡಿ­ದ್ದಾ­ರಲ್ಲದೇ, ಆರೋಪಿಗಳನ್ನು ಬಂಧಿ­ಸಿಲ್ಲ. ಕೂಡಲೇ ವಕೀಲ ಇವಣಿ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊ­ಳ್ಳು­ವುದಾಗಿ ಡಿಸಿಪಿ ಸುಭಾಷ್‌ ಗುಡಿ­ಮನಿ ಭರವಸೆ ನೀಡಿದ ನಂತರ ವಕೀ­ಲರು ಪ್ರತಿಭಟನೆ ಹಿಂತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry