ಮಂಗಳವಾರ, ಜೂನ್ 22, 2021
29 °C

ಹಲ್ಲೆ ಖಂಡಿಸಿ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ರೋಗಿಯನ್ನು ದಾಖಲು ಮಾಡದ ನರ್ಸ್ ಕಾರ್ಯವೈಖರಿ ಪ್ರಶ್ನಿ ಸಿದ ವಾರ್ಡ್‌ಬಾಯ್ ಮೇಲೆ ನರ್ಸ್ ಗಂಡ ಮತ್ತು ಮಗ ಶುಕ್ರವಾರ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಡಿ ಗ್ರೂಪ್ ನೌಕ ರರು ಶನಿವಾರ ಮುಂಜಾನೆ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ವಾರ್ಡ್‌ಬಾಯ್ ಸಗಾಯ್ ಗಾಯಗೊಂಡವರು.ಮಸ್ಕಂ ನಿವಾಸಿ ವಿಜಯ್ ವಾಂತಿ ಬೇಧಿಯಿಂದ ಶುಕ್ರವಾರ ರಾತ್ರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದರು. ರೋಗಿಯನ್ನು ಪರಿಶೀಲಿಸಿದ ವೈದ್ಯ ಡಾ.ಖಾನ್ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಾಗುವಂತೆ ಚೀಟಿ ಬರೆದು ಕಳಿಸಿದರು.

 

ಆದರೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್ ಅಮಲಸುಂದರಿ ರೋಗಿಯನ್ನು ದಾಖಲು ಮಾಡಲು ನಿರಾಕರಿಸಿದರು. ಪುನಃ ರೋಗಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾದರು. ಘಟನೆ ವಿವರಗಳನ್ನು ಪಡೆಯಲು ಡಾ.ಖಾನ್ ವಾರ್ಡ್ ಬಾಯ್ ಸಗಾಯ್ ಅವರನ್ನು ಸಾಂಕ್ರಾ ಮಿಕ ಆಸ್ಪತ್ರೆಗೆ ಕಳಿಸಿದರು. ಈ ಹಂತ ದಲ್ಲಿ ವಾರ್ಡ್‌ಬಾಯ್ ಮತ್ತು ನರ್ಸ್ ನಡುವೆ ವಾಗ್ವಾದ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ನರ್ಸ್ ಜೊತೆ ವಾಗ್ವಾದ ನಡೆಸಿದ್ದ ರಿಂದ ಕುಪಿತಗೊಂಡ ನರ್ಸ್ ಪತಿ ಜಯಶೀಲನ್ ಮತ್ತು ಮಗ ಜೆ.ಎಸ್.ಸುಂದರ್ ಸಾರ್ವಜನಿಕ ಆಸ್ಪತ್ರೆಗೆ ಬಂದು ಸಗಾಯ್ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಮುಖಂಡ ರಾದ ರವಿರೆಡ್ಡಿ, ಮಾಲತೇಶ್, ಕದಿರಪ್ಪ ಮೊದಲಾದವರು ಗಾಯಾಳು ಭೇಟಿ ಮಾಡಿ ವಿಚಾರಣೆ ನಡೆಸಿದರು. ರಾಬರ್ಟ್‌ಸನ್‌ಪೇಟೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.