ಭಾನುವಾರ, ಜೂನ್ 20, 2021
28 °C

ಹಲ್ಲೆ ಖಂಡಿಸಿ ವೈದ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಚಿಕಿತ್ಸೆಗೆ ಬಂದಿದ್ದ ರೋಗಿಯ ಕಡೆಯವರು ವೈದ್ಯರು ಹಾಗೂ ನರ್ಸ್‌ಗಳ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ಶುಕ್ರವಾರ ಮುಂಜಾನೆ ವೈದ್ಯರು ಹಾಗೂ ನರ್ಸ್‌ಗಳು  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.~ಹಾಸನದ ರಂಗೋಲಿಹಳ್ಳದ ಯಶೋಧ ಎಂಬುವರನ್ನು ಸುಟ್ಟ ಗಾಯಗಳ ಚಿಕಿತ್ಸೆಗೆ ಗುರುವಾರ ರಾತ್ರಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಕರೆತಂದಿದ್ದ ಅವರ ಪತಿ ಪ್ರಶಾಂತ್ ಪತ್ನಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಮನೆಯವರನ್ನು ಕರೆದುಕೊಂಡು ಬರುವುದಾಗಿ ಹೇಳಿ ಮರಳಿದ್ದರು. ಪ್ರಶಾಂತ್ ಆಸ್ಪತ್ರೆಗೆ ಬರುವಷ್ಟರಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ಶೇ.90ರಷ್ಟು ಸುಟ್ಟಗಾಯಗಳಿರುವುದರಿಂದ ಉಳಿಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಪ್ರಶಾಂತ್‌ಗೆ ತಿಳಿಸಿದರು.  ಇದರಿಂದ ಸಿಟ್ಟಾದ ಪ್ರಶಾಂತ್, ಪತ್ನಿಯನ್ನು ಬದುಕಿಸಲೇಬೇಕು, ನೀವು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಜಗಳ ಆರಂಭಿಸಿ ಸಹೋದರ ಚೇತನ್ ಹಾಗೂ ನಾಲ್ಕು  ಮಂದಿ ನರ್ಸ್ ಮೇಲೆ ಹಲ್ಲೆ ನಡೆಸಿ ದರು.  ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿ ಕಳುಹಿಸುವುದಾಗಿ ಡಿವೈಎಸ್‌ಪಿ,  ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದರು. ಯಶೋಧಾ ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.