ಹಲ್ಲೆ ಪ್ರಕರಣ: ಡಿವೈಎಸ್‌ಪಿ ಪುತ್ರನ ವಿರುದ್ಧ ದೂರು ದಾಖಲು

7

ಹಲ್ಲೆ ಪ್ರಕರಣ: ಡಿವೈಎಸ್‌ಪಿ ಪುತ್ರನ ವಿರುದ್ಧ ದೂರು ದಾಖಲು

Published:
Updated:

ಬೆಂಗಳೂರು:  ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಿಐಡಿ ಡಿವೈಎಸ್‌ಪಿ ದಾವುದ್ ಖಾನ್ ಅವರ ಮಗನ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾವುದ್ ಖಾನ್ ಪುತ್ರ ಸುಹೈಲ್ ಖಾನ್ ಮತ್ತು ಆತನ ಸ್ನೇಹಿತರು ನ್ಯಾಷನಲ್ ಗೇಮ್ಸ ವಿಲೇಜ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಗುರುವಾರ ರಾತ್ರಿ ಅದೇ ಅಪಾರ್ಟ್‌ಮೆಂಟ್‌ನಲ್ಲಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಕಂಪ್ಯೂಟರ್‌ನಲ್ಲಿ ಹಾಡು ಕೇಳುತ್ತಿದ್ದರು.ಈ ವೇಳೆ ಹಾಡಿನ ಶಬ್ಧವನ್ನು ಕಡಿಮೆ ಮಾಡುವಂತೆ ಸುಹೈಲ್ ಆ ವಿದ್ಯಾರ್ಥಿಗಳಿಗೆ ಹೇಳಿದ. ಈ ವಿಷಯವಾಗಿ ಪರಸ್ಪರರ ನಡುವೆ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸುಹೈಲ್ ಆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry