ಗುರುವಾರ , ಮೇ 13, 2021
35 °C

ಹಲ್ಲೆ: ಸ್ವಯಂನಿಯಂತ್ರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾರ್ಚ್ ಎರಡರಂದು ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಯಂಥಾ ಘಟನೆಗಳು ಮರುಕಳಿಸದಿರಲು ಮಾಧ್ಯಮ ಪ್ರತಿನಿಧಿಗಳು, ವಕೀಲರು ಹಾಗೂ ಪೊಲೀಸರು ಸ್ವಯಂ ನಿಯಂತ್ರಣ ಹೊಂದಬೇಕಾದ ಅಗತ್ಯವಿದೆ~ ಎಂದು ಪೀಪಲ್ಸ್ ಡೆಮಾಕ್ರಟಿಕ್ ಫೋರಂನ ಕಾರ್ಯದರ್ಶಿ ನಗರಗೆರೆ ರಮೇಶ್ ಹೇಳಿದರು.ಪೀಪಲ್ಸ್ ಡೆಮಾಕ್ರಟಿಕ್ ಫೋರಂ ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಗಳು ಮಾರ್ಚ್ ಎರಡರಂದು ನಡೆದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಯ ಬಗ್ಗೆ ನಡೆಸಿರುವ ಸತ್ಯಶೋಧನಾ ವರದಿಯನ್ನು ನಗರದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಪ್ರಜಾಪ್ರಭುತ್ವದಲ್ಲಿ ಮಾಧ್ಯಮ, ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಗಳು ಮುಖ್ಯವಾದ ಮೂರು ಅಂಗಗಳು. ಈ ಮೂರು ಅಂಗಗಳ ನಡುವೆಯೇ ಶೀಥಲಯುದ್ಧ ನಡೆಯುತ್ತಿದ್ದರೆ ಅದರ ಪರಿಣಾಮ ಜನ ಸಾಮಾನ್ಯರ ಮೇಲಾಗುತ್ತದೆ~ ಎಂದರು.`ಘಟನೆಯ ಸತ್ಯಶೋಧನಾ ವರದಿಯನ್ನು ಪ್ರೆಸ್ ಕೌನ್ಸಿಲ್, ಬಾರ್ ಕೌನ್ಸಿಲ್, ನ್ಯಾಷನಲ್ ಪೊಲೀಸ್ ಕೌನ್ಸಿಲ್ ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ವರದಿ ಸಲ್ಲಿಸಿದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದರು.ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ನ ಕಾರ್ಯದರ್ಶಿ ವೈ.ಜೆ.ರಾಜೇಂದ್ರ, ಸಂಚಾಲಕರಾದ ರಾಮ್‌ದಾಸ್ ರಾವ್, ಸ್ವಾತಿ ಶೇಷಾದ್ರಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.