ಶುಕ್ರವಾರ, ನವೆಂಬರ್ 15, 2019
21 °C

ಹಳದಿ ಲೋಹ ಮತ್ತೆ ಕುಸಿತ

Published:
Updated:

ನವದೆಹಲಿ (ಐಎಎನ್‌ಎಸ್): ದೇಶದ ಚೀನಿವಾರ ಪೇಟೆಯಲ್ಲಿ ಹಳದಿ ಲೋಹದ ಬೆಲೆಯು ಮಂಗಳವಾರ ಮತ್ತೆ ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಧಾರಣೆ ರೂ. 27,000ಕ್ಕೆ ಇಳಿದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಚೀನಿವಾರ ಪೇಟೆಯಲ್ಲಿ ಚಿನ್ನವು ದಾಖಲೆ ಪ್ರಮಾಣದಲ್ಲಿ  ಕುಸಿತ ಕಾಣುತ್ತಿದೆ.ವರ್ಷದ ಆರಂಭದಿಂದಲೇ ಸುಮಾರು ಶೇ 20ರಷ್ಟು ಕುಸಿತವಾಗಿದೆ. ಕಳೆದ ಮೂರು ಅವಧಿಯಲ್ಲಿ 10 ಗ್ರಾಂ ಚಿನ್ನದ ಧಾರಣೆಯಲ್ಲಿ  ರೂ. 3,160 ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಕೂಡ ಕುಸಿತವಾಗಿದ್ದು, ಬೆಳ್ಳಿ ಬೆಲೆಯಲ್ಲಿ ಚೀನಿವಾರ ಪೇಟೆಯ ಮಾರುಕಟ್ಟೆ ಧಾರಣೆಯ ಮೂರು ಅವಧಿಯಲ್ಲಿಯೂ ರೂ. 6,475 ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಧಾರಣೆ ರೂ. 26,440.

ಪ್ರತಿಕ್ರಿಯಿಸಿ (+)