ಹಳಿಯಾಳ: ರಾಷ್ಟ್ರಮಟ್ಟದ ಕುಸ್ತಿ 19ರಿಂದ

7

ಹಳಿಯಾಳ: ರಾಷ್ಟ್ರಮಟ್ಟದ ಕುಸ್ತಿ 19ರಿಂದ

Published:
Updated:

ಹಳಿಯಾಳ: ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಸ್ಥೆ, ವ್ಹಿ.ಆರ್. ದೇಶಪಾಂಡೆ ಟ್ರಸ್ಟ್ , ಉತ್ಕರ್ಷ ಸಮಗ್ರ  ಗ್ರಾಮೀಣ ಅಭಿವೃದ್ದಿ ಯೋಜನೆ ಆಶ್ರಯದಲ್ಲಿ ಫೆಬ್ರುವರಿ 19 ರಿಂದ 21ರ ವರೆಗೆ ಇಲ್ಲಿಯ ಜಿಲ್ಲಾ ಕುಸ್ತಿ ಅಖಾಡಾದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕುಸ್ತಿ  ಸ್ಪರ್ಧೆ ನಡೆಯಲಿದೆ.ಪುರುಷರ ವಿಭಾಗದಲ್ಲಿ ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ  ಸ್ಮರಣಾರ್ಥ ಮಹಾನ್ ಭಾರತ ಕೇಸರಿ ರಾಷ್ಟ್ರಮಟ್ಟದ ಕುಸ್ತಿ, 80 ಕೆಜಿ ಮೇಲ್ಪಟ್ಟ ಅಖಿಲ ಭಾರತಮಟ್ಟದ ಮುಕ್ತ ಸ್ಪರ್ಧೆಗಳು ಇವೆ. ಕರ್ನಾಟಕ ಕೇಸರಿ ರಾಜ್ಯ ಮಟ್ಟದ ಸ್ಪರ್ಧೆಯು 80 ಕೆ.ಜಿ, 74 ಕೆ.ಜಿ ವಿಭಾಗದ ಕರ್ನಾಟಕ ಕೇಸರಿ ಸ್ಪರ್ಧೆ, 60 ಕೆ.ಜಿ ವಿಭಾಗದ ಕರ್ನಾಟಕ ಕಿಶೋರ, ಕಿರಿಯ ವಿಭಾಗದ 17 ವರ್ಷದೊಳಗಿರುವ ಕರ್ನಾಟಕ ಚಾಂಪಿಯನ್ ಪ್ರಶಸ್ತಿಯ ಕುಸ್ತಿಯ 54 ಕೆ.ಜಿ ವಿಭಾಗ ದಿಂದ 28 ಕೆ.ಜಿ ವಿಭಾಗದ ವರೆಗೆ ನಡೆಯಲಿವೆ ಎಂದು ಸಂಘಟನಾ ಕಾರ್ಯದರ್ಶಿ ಯಶವಂತ ಸ್ವಾಮೀಜಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry