ಹಳಿ ತಪ್ಪಿದ ಪ್ಯಾಸೆಂಜರ್ ರೈಲು

7

ಹಳಿ ತಪ್ಪಿದ ಪ್ಯಾಸೆಂಜರ್ ರೈಲು

Published:
Updated:

ಜಲ್‌ಪೈಗುರಿ (ಪಶ್ಚಿಮಬಂಗಾಳ): ಜಲ್‌ಪೈಗುರಿ ಜಿಲ್ಲೆಯಲ್ಲಿ ಗುರುವಾರ ತಡ ರಾತ್ರಿ ಭಾರಿ ಬಿರುಗಾಳಿ ಬೀಸಿದ್ದರಿಂದ ಹಳಿ ಮೇಲೆ ಮರ ಬಿದ್ದು ಪ್ಯಾಸೆಂಜರ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮದರಹಿತ್‌ನಲ್ಲಿ ಈ ಘಟನೆ ನಡೆದಿದ್ದು, ಸಿಲಿಗುರಿ- ಅಲಿಪುರ್‌ದ್ವಾರ ಪ್ಯಾಸೆಂಜರ್ ರೈಲಿನ ಪ್ರಯಾಣಿಕರು ಸ್ಥಳದಲ್ಲೇ ಉಳಿಯುವಂತೆ ಆಗಿದೆ. ಅಲಿಪುರ್‌ದ್ವಾರದಿಂದ ಪರಿಹಾರ ಕಾರ್ಯಾಚರಣೆಯ ವಾಹನ ಸ್ಥಳಕ್ಕೆ ಇನ್ನೂ ಧಾವಿಸಬೇಕಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ಹೇಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry