ಸೋಮವಾರ, ಜನವರಿ 27, 2020
21 °C

ಹಳಿ ತಪ್ಪಿದ ರೈಲು – ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಪಿಟಿಐ): ಸಮೀಪದ ಬ್ರಾಂಕ್‌್ಸ ಪ್ರದೇಶದಲ್ಲಿ ಪ್ರಯಾಣಿಕರ ರೈಲೊಂದು ಹಳಿ ತಪ್ಪಿದ ಪರಿಣಾಮ ಕನಿಷ್ಠ ನಾಲ್ಕು ಮಂದಿ ಮೃತಪಟ್ಟು 40 ಮಂದಿ ಗಾಯಗೊಂಡಿದ್ದಾರೆ.ಉತ್ತರ ಮೆಟ್ರೊ ರೈಲಿನ ಏಳು ಬೋಗಿಗಳ ಪೈಕಿ ಐದು ಬೋಗಿಗಳು  ಸ್ಪ್ಯುಟೆನ್‌ ಡುವ್ವಿಲ್‌ ನಿಲ್ದಾಣದ ಬಳಿಯ ತಿರುವಿನಲ್ಲಿ ಭಾನುವಾರ ಬೆಳಿಗ್ಗೆ ಹಳಿತಪ್ಪಿದೆ ಎಂದು ನ್ಯೂಯಾರ್ಕ್‌ನ ಅಗ್ನಿ ಶಾಮಕ ಇಲಾಖೆ ಹೇಳಿದೆ.ಹಳಿ ತಪ್ಪಿದ ಸಂದರ್ಭದಲ್ಲಿ ರೈಲಿನಿಂದ ಹೊರ ಬಿದ್ದು ಕನಿಷ್ಠ ಇಬ್ಬರು ಮೃತಪಟ್ಟಿ­ದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅತಿವೇಗದಲ್ಲಿ ಚಲಿಸುತ್ತಿ­ದ್ದುದು ಅಪ­ಘಾತಕ್ಕೆ ಕಾರಣ ಎಂದು ಘಟನೆಯಲ್ಲಿ ಗಾಯ­ಗೊಂಡ ಪ್ರಯಾಣಿಕ­ರೊಬ್ಬರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)