ಗುರುವಾರ , ಜೂನ್ 24, 2021
23 °C

ಹಳೆಗನ್ನಡ ಇಂದಿಗೂ ಜೀವಂತ: ವಿಷ್ಣುನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ‘ಹಳೆಗನ್ನಡವು ಇಂದಿಗೂ  ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದ್ದರೂ ಕೂಡ ಅದನ್ನು ಯುವ ಜನಾಂಗ ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಹಳೆಗನ್ನಡಕ್ಕೆ ಸಂಬಂಧಿ ಸಿದ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವುದು ಅಗತ್ಯ’ ಎಂದು ಸಾಹಿತಿ ವಿಷ್ಣು ನಾಯ್ಕ ಹೇಳಿದರು.ಕರ್ನಾಟಕ ಸಂಘ ಅಂಕೋಲಾ, ಶ್ರೀ ಕಾತ್ಯಾಯಿನಿ ಪ್ರೌಢಶಾಲೆ ಅವರ್ಸಾ  ಆಶ್ರಯದಲ್ಲಿ ಶಾಲಾವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಹಳೆಗನ್ನಡ ವಾಚನ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರನ್ನನ ‘ಸಾಹಸಭೀಮ ವಿಜಯ’ದ ಆಯ್ದ ಭಾಗಗಳನ್ನು ವಾಚಿಸಿ ಅವರು ಮಾತನಾಡಿದರು.ಕರ್ನಾಟಕ ಸಂಘದ ಅಧ್ಯಕ್ಷ ಜಗದೀಶ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹಳೆಗನ್ನಡ ಕಾವ್ಯಗಳು ಜೀವಂತಿಕೆ ಯಿಂದ ಇಂದಿಗೂ ಪ್ರಸ್ತುತವಾಗಿದ್ದು, ವಿದ್ಯಾರ್ಥಿಗಳಲ್ಲಿ ಓದಿ ಗ್ರಹಿಸಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ವನ್ನು ನಾವು ಬೆಳೆಸಬೇಕಾಗಿದೆ’ ಎಂದರು.ಕಾತ್ಯಾಯಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿ. ರೇವಣಕರ, ಮುಖ್ಯಶಿಕ್ಷಕ ಗಂಗಾಧರ ನಾಯ್ಕ, ಸಾಹಿತಿಗಳಾದ ಶಾಂತಾರಾಮ ನಾಯಕ, ಎಂ.ಎಚ್. ಹಬ್ಬು, ಮಹಾದೇವ ಮಾಸ್ತರ, ಶಿವಬಾಬಾ ನಾಯ್ಕ, ಗೌರೀಶ ನಾಯಕ, ಕಾತ್ಯಾಯಿನಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಉಲ್ಲಾಸ ರೇವಣಕರ, ಮಾಜಿ ಅಧ್ಯಕ್ಷ ಎನ್.ಆರ್. ಪೈ ಉಪಸ್ಥಿತರಿದ್ದರು.ಕರ್ನಾಟಕ ಸಂಘದ ಕಾರ್ಯದರ್ಶಿ ಉಲ್ಲಾಸ ಹುದ್ದಾರ ಸ್ವಾಗತಿಸಿದರು.  ರಮೇಶ ಕಳ್ಳಿಮನೆ ಕಾರ್ಯಕ್ರಮ ನಿವರ್ಹಿಸಿದರು. ಉಪಾಧ್ಯಕ್ಷ ಗೋಪಾಲಕೃಷ್ಣ ನಾಯಕ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.