ಹಳೆಯ ನಿಯಮ ಸಡಿಲಿಕೆಗೆ ಸೂಚನೆ

7

ಹಳೆಯ ನಿಯಮ ಸಡಿಲಿಕೆಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ದೇಶದಾದ್ಯಂತ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರ್ಕಾರವು ಹಳೆಯ ನಿಯಮ ಸಡಿಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಮೂಲಗಳು ಹೇಳಿವೆ.



ಶಿಕ್ಷಣಕ್ಕೆ ಒತ್ತು ನೀಡದೇ ಕೇವಲ ದುಬಾರಿ ಶುಲ್ಕಕ್ಕೆ ಕಾರಣವಾಗಿರುವ ಹಳೆಯ ನಿಯಮ ಪುನರ್‌ರೂಪಿಸುವಂತೆ ಆರೋಗ್ಯ ಸಚಿವಾಲಯವು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಸೂಚನೆ ನೀಡಿದೆ.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇರುವ ನಿಯಮಗಳನ್ನು ಪುನರ್‌ರೂಪಿಸಬೇಕಾಗಿದೆ.



ಈ ಸಂಬಂಧ ನಾವು `ಎಂಸಿಐ~ಗೆ ಸೂಚನೆ ನೀಡಿದ್ದೇವೆ. ಪ್ರಸ್ತುತ ದೇಶದಲ್ಲಿ 2,000 ರೋಗಿಗಳಿಗೆ ಒಬ್ಬರು ವೈದ್ಯರು ಇದ್ದಾರೆ. ವೈದ್ಯರ ಸಂಖ್ಯೆ  ಹೆಚ್ಚಿಸಲು ಮುಂದಿನ ವರ್ಷ ಕನಿಷ್ಠ  6,000ದಿಂದ 7,000 ಸೀಟುಗಳನ್ನು ಹೊಸದಾಗಿ ಸೇರಿಸಲು ನಿರ್ಧರಿಸಿದ್ದೇವೆ. ಹೊಸ ನಿಯಮವು ಸದ್ಯದ ಅಗತ್ಯ್ನ ಪೂರೈಸುವಂತಿರಬೇಕು~ ಎಂದು ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.



ಕಾಲೇಜು ಹಾಗೂ ಕಡ್ಡಾಯ ಸಭಾಂಗಣ, ಆಟದ ಮೈದಾನ, ತರಗತಿ, ವಾಚನಾಲಯ ಹಾಗೂ ಪ್ರಯೋಗಾಲಯ ನಿರ್ಮಾಣಕ್ಕೆ ಬೇಕಾಗುವ ಜಾಗದ ಕುರಿತ ನಿಯಮಗಳನ್ನು ಪರಿಶೀಲಿಸಲಾಗುತ್ತಿದೆ. ಶುಲ್ಕ ಹಾಗೂ ಬೋಧಕ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನೂ ಸಡಿಲಗೊಳಿಸಲಾಗುತ್ತಿದೆ.



`ಈಗಿನ ನಿಯಮದಂತೆ ಎಕರೆ ಗಟ್ಟಲೆ ಪ್ರದೇಶ ಬಳಸಿಕೊಳ್ಳುವುದರ ಬದಲು ಬಹುಮಹಡಿ ಕಟ್ಟಡದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ. ಭೂಮಿ ಕೊರತೆ ಇರುವುದರಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ~ ಎಂದು ಎಂಸಿಐ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry