ಮಂಗಳವಾರ, ನವೆಂಬರ್ 19, 2019
29 °C

ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ

Published:
Updated:

ಸಿರುಗುಪ್ಪ: ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ 106ನೇ ಜನ್ಮದಿನದ ಸಂಭ್ರಮವನ್ನು ಇಲ್ಲಿಯ ಮಠದ ನೂರಾರು ಹಳೆಯ ವಿದ್ಯಾರ್ಥಿಗಳು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಿ ಗುರುವಂದನೆ ಸಲ್ಲಿಸಿದರು.ತಾಲ್ಲೂಕಿನ ಬೈರಾಪುರ, ಕರೂರು, ಚಾಣಕನೂರು, ಕರ್ಚಿಗನೂರು, ಹಾಗಲೂರು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಸೋಮವಾರ ಶ್ರೀಗಳ ಜನ್ಮದಿನದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದ್ದಲ್ಲದೇ ಕೇಕ್ ಕತ್ತರಿಸಿ, ಗ್ರಾಮದಲ್ಲಿ ದಾಸೋಹ ನಡೆಸಿ, ಕಾಯಕ ಜೀವಿಗೆ ಧೀರ್ಘಾಯುಷ್ಯ ಕೋರಿ ಶ್ರೀಗಳ ಸೇವೆಯನ್ನು ನೆನೆದರು.ಬೈರಾಪುರ  ಗ್ರಾಮದಲ್ಲಿ ಕೊಂಚಗೇರಿ ಶಿವಪ್ಪ ತಾತನವರು ಶ್ರೀಗಳ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಿದರು. ಚಾಣಕನೂರು ಗ್ರಾಮದಲ್ಲಿ ಹಾಲ್ವಿಯ ಅಭಿನವ ಮಹಾಂತ ಶ್ರೀಗಳು ಸಿದ್ಧಗಂಗಾ ಶ್ರೀಗಳ ಕಾಯಕ ಸಿದ್ಧಾಂತವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕರೂರು ಗ್ರಾಮದಲ್ಲಿ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಪ್ರತಿಕ್ರಿಯಿಸಿ (+)