ಶುಕ್ರವಾರ, ಜೂನ್ 18, 2021
28 °C

ಹಳೆ ಪ್ರಮಾಣ ಪತ್ರದೊಡನೆ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಾತಿ ಪ್ರಮಾಣಪತ್ರ ವಿವಾದಕ್ಕೆ ಗುರಿ­ಯಾದ ಲೋಕ­ಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಕೇಶವ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರದ ಜೊತೆಯಲ್ಲಿ 1994ರಲ್ಲಿ ಕೋಲಾರ ತಹಶೀಲ್ದಾ­ರ­ರಿಂದ ಪಡೆದಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.ಬೆಂಗಳೂರಿನ ಮತ್ತಿಕೆರೆ ನಿವಾಸಿ­ಯಾದ ಕೇಶವ ಅವರಿಗೆ ಮಾರ್ಚ್ 6ರಂದು ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರರು ಜಾತಿ ಪ್ರಮಾ­ಣ­ಪತ್ರ ನೀಡಿದ್ದರು. 1994ರ ಮೇ 5ರಂದು ಕೋಲಾರ ತಹಶೀಲ್ದಾ­ರರಿಂದ ಕೇಶವ ಪಡೆದಿದ್ದ ಪ್ರಮಾಣ ಪತ್ರದ ಆಧಾರದಲ್ಲಿ ಅದನ್ನು ನೀಡ­ಲಾ­ಗಿತ್ತು. ಆಕ್ಷೇಪಣೆ ಎದುರಾದ ಹಿನ್ನೆಲೆಯಲ್ಲಿ ಮಾ.19ರಂದು ಪ್ರಮಾಣಪತ್ರವನ್ನು ತಹಶೀಲ್ದಾರ್‌ ರದ್ದು­ಗೊಳಿಸಿದ್ದಾರೆ.ರದ್ದು ಮಾಡುವಂತಿಲ್ಲ: ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಜಾತಿ ಪ್ರಮಾಣಪತ್ರವನ್ನು ನೀಡಿದ ಅಧಿಕಾರಿಗೆ ಅದನ್ನು ರದ್ದು ಮಾಡುವ ಅಧಿಕಾರವಿಲ್ಲ. ಸುಮಾರು ಆರು ಹಂತದ ಉನ್ನತಮಟ್ಟದ ಸಭೆಗಳನ್ನು ನಡೆಸಿದ ಬಳಿಕವಷ್ಟೇ ಪ್ರಮಾಣಪತ್ರ ರದ್ದು ನಿರ್ಧಾರವನ್ನು ಕೈಗೊಳ್ಳ­ಲಾಗುತ್ತದೆ. ಆದರೆ ಕೇಶವ ಅವರ ಪ್ರಮಾಣಪತ್ರದ ವಿಚಾರದಲ್ಲಿ ನಿಯಮ ಪಾಲನೆ ಆಗಿಲ್ಲ. ಅಧಿಕಾರ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.ಕೇಶವ ಅವರ ಪೋಷಕರು ಮಾಲೂರಿನ ಮೂಲದವರು. ಪರಿಶಿಷ್ಟ ಜಾತಿಯ ಭೋವಿ ಸಮುದಾಯದವರು. ವಿದ್ಯಾಭ್ಯಾಸಕ್ಕಾಗಿ ಕೇಶವ ಅವರು ಆಂಧ್ರದಲ್ಲಿ ಕೆಲ ವರ್ಷ ಇದ್ದರು. 1994ರಲ್ಲಿ ಕೇಶವ ಅವರಿಗೆ ಕೋಲಾರದ ತಹಶೀಲ್ದಾರರು ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಜೀವಿತಾವಧಿ ಕಾಲಕ್ಕೆ ನೀಡಿದ್ದಾರೆ. ಅದೇ ಪ್ರಮಾಣಪತ್ರವನ್ನು ನಾಮಪತ್ರದ ಜೊತೆಗೆ ಸಲ್ಲಿಸಲಾಗಿದೆ, ಕಾನೂನು ಅಡಚಣೆಗಳು ಏನೂ ಇಲ್ಲ ಎಂದು ಕೇಶವ ಪರ ವಕೀಲ ಶಂಕರಪ್ಪ ತಿಳಿಸಿದರು.ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರರು ಪ್ರಮಾಣಪತ್ರವನ್ನು ರದ್ದುಗೊಳಿಸುವ ಮುನ್ನ ಕೇಶವ ಅವರಿಗೆ ನೋಟಿಸ್‌ ನೀಡಿಲ್ಲ. ಹೀಗಾಗಿ ರದ್ದಾಗಿರು­ವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.