ಶುಕ್ರವಾರ, ನವೆಂಬರ್ 22, 2019
22 °C

ಹಳೇಬೀಡು:ತಂಪೆರೆದ ಮಳೆ

Published:
Updated:
ಹಳೇಬೀಡು:ತಂಪೆರೆದ ಮಳೆ

ಹಳೇಬೀಡು: ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಮಳೆಯು ವಾತಾವರಣವನ್ನು ತಂಪುಗೊಳಿಸಿ ಇಳೆಯ ಕೊಳೆ ತೊಳೆಯಿತು.

ವರುಣನ ಆಗಮನ ರೈತರಲ್ಲಿ ಹರ್ಷ ಮೂಡಿಸಿದೆ. ಪುನಃ ಮಳೆ ಇದೇ ರೀತಿ ಬರುತ್ತಿರಬೇಕು, ಇಲ್ಲ ದಿದ್ದರೆ ಧಗೆ ಇನ್ನೂ ಹೆಚ್ಚಾಗುತ್ತದೆ ಎಂಬುದು ರೈತರ ಊವಾಚ. ದಟ್ಟ ಮೋಡಗಳು ತಾಸುಗಟ್ಟಲೇ ಮಳೆ ಸುರಿಸುವ ನಿರೀಕ್ಷೆ ಹುಟ್ಟಿಸಿದ್ದರೂ ಮಳೆ ರಾಯ ಕೃಪೆ ತೋರಿದ್ದು 20 ನಿಮಿಷ ಮಾತ್ರ.ಪಟ್ಟಣದಲ್ಲಿ ಗ್ರಾಮ ದೇವತೆ ಜಾತ್ರೆ ಆರಂಭವಾಗಿದ್ದು, ಪೂಜೆ ಕಾರ್ಯಕ್ರಮಗಳಿಗೆ ಕೊಂಚ ಅಡ್ಡಿಉಂಟುಮಾಡಿದ್ದರೂ ಜನರಲ್ಲಿ ಸಂಭ್ರಮ ಮೂಡಿಸಿತು. ಶುಕ್ರವಾರ (ಏ.26) ನಡೆಯುವ ಗ್ರಾಮದೇವತೆ ಜಾತ್ರೆಗೆ ಬಿಡುವು ನೀಡಿ ಕೆರೆ ಕಟ್ಟೆ ತುಂಬಿಸುವ ಮಳೆ ಸುರಿಯಲಿ ಎಂದು ಭಕ್ತರು ಜಾತ್ರೆಯಲ್ಲಿ ಪ್ರಾರ್ಥಿಸಿದರು.ರಸ್ತೆಯಲ್ಲಿ ಚರಂಡಿ ನೀರು: ಜಾತ್ರೆ ನಡೆಯುವ ಉಡಸಲಮ್ಮ ದೇಗುಲದ ಬಳಿ ಲೋಕೋಪಯೋಗಿ ಇಲಾಖೆು ವಸತಿಗೃಹ ಮುಂಭಾಗದಲ್ಲಿ ಚರಂಡಿ ಯಲ್ಲಿ ತುಂಬಾ ಕಸಕಡ್ಡಿ ತುಂಬಿರು ವುದರಿಂದ ಸರಾಗವಾಗಿ ನೀರು ಹರಿ ಯಲು ಸಾಧ್ಯವಾಗದೇ ಚರಂಡಿಯ ಗಲೀಜು ನೀರು ರಸ್ತೆಯಲ್ಲಿ ಹರಿಯಿತು.ಚಾಮಗಳ ಕುಣಿತ, ಕೆಂಚರಾಯ ಕುಣಿತ ಹಾಗೂ ಪಲ್ಲಕ್ಕಿ ಉತ್ಸವ ನಡೆಯುವ ಸ್ಥಳದಲ್ಲಿಯೇ ಗಲೀಜು ನೀರು ನಿಂತಿದ್ದರಿಂದ ವಾತವರಣ ಕಲುಷಿತವಾಯಿತು. ರಸ್ತೆಯಲ್ಲಿ ತಿರುಗಾಡುವ ಜನರು `ಸರ್ಕಸ್' ಮಾಡಿಕೊಂಡು ಮುಂದೆ ಸಾಗ ಬೇಕಾಯಿತು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಚಕ್ರಗಳಿಂದ ರಸ್ತೆ ಬದಿಯಲ್ಲಿ ಸಾಗುತ್ತಿದ್ದವರಿಗೆ ಗಲೀಜು ರಾಚುತ್ತಿತ್ತು.

ಪ್ರತಿಕ್ರಿಯಿಸಿ (+)