ಹಳೇಬೀಡು: ಭರವಸೆಯ ಕ್ರೀಡಾಪಟುಗಳು

7

ಹಳೇಬೀಡು: ಭರವಸೆಯ ಕ್ರೀಡಾಪಟುಗಳು

Published:
Updated:

ಹಳೇಬೀಡು: ಕೆಲವು ವಿದ್ಯಾರ್ಥಿಗಳು ಮಂದಾಹಾಸ ಬೀರುತ್ತಾ ಸ್ನೇಹಿತರತ್ತ ಕೈಬೀಸಿ ನಗೆಚೆಲ್ಲಿದರೆ, ಕಾಲೇಜಿನ ಸಮಸ್ತ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕಿ ಕುಣಿ ಯುತ್ತಿದ್ದರು. ವಿದ್ಯಾರ್ಥಿಗಳ ಹರ್ಷೋ ದ್ಗಾರ ಮುಗಿಲು ಮುಟ್ಟುವಂತಿದ್ದರೆ, ಪ್ರಾಚಾರ್ಯ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಸಂಭ್ರಮವನ್ನು ಕಂಡು ಮುಗುಳ್ನಗುತ್ತ ವಿದ್ಯಾರ್ಥಿಗಳ ಸಾಧನೆ ಯನ್ನು ಮುಕ್ತಕಂಠದಿಂದ ಹಾಡಿ ಹೊಗಳುತ್ತಿದ್ದರು.ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜಿ.ಡಿ.ವಿದ್ಯಾ ಮಹಾರಾಷ್ಟ್ರದ ಸೊಲ್ಲಾ ಪುರದಲ್ಲಿ ನಡೆದ ರಾಷ್ಟಮಟ್ಟದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಲ್ಲದೆ, ಹೆಣ್ಣು ಮಕ್ಕಳ ಕೊಕ್ಕೋ ತಂಡ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ದರ್ಶನ್ 100 ಮೀಟರ್ ಓಟದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ಸಹಪಾಠಿಗಳು ಹಾಗೂ ಉಪನ್ಯಾಸಕ ವೃಂದದವರು ಶನಿವಾರ ಏರ್ಪಡಿಸಿದ್ದ ಸಂಭ್ರ ಮೋತ್ಸಾ ಹದಲ್ಲಿ ಕಂಡುಬಂದ ದೃಶ್ಯ ಇದು.ಕಾಲೇಜಿನ ಗ್ರಾಮೀಣ ಭಾಗದ ವಿದ್ಯಾರ್ಥಿ ಜಿ.ಡಿ.ವಿದ್ಯಾ ಬಾಲ್ಯದಿಂ ದಲೂ ಅಪ್ರತಿಮ ಕೊಕ್ಕೊ ಪಟು. ಎಸ್‌ಎಸ್‌ಎಲ್‌ಸಿ ಅತ್ಯುನ್ನತ ಶ್ರೇಣಿಯ ಉತ್ತಿರ್ಣರಾದ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರಿಂದ ನಗರದ ಖಾಸಗಿ ಶಾಲೆಯಲ್ಲಿ ಓದುವಂತಹ ಅವಕಾಶ ದೊರಕಲಿಲ್ಲ. ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರವೇಶಿಸಿದ್ದೇ ಅವರಿಗೆ ವರದಾನವಾಯಿತು.

 

ಸರಿಸಮವಾಗಿ ಆಟವಾಡುವ ಸಹಪಾಠಿಗಳು ಅವರಿಗೆ ಸಿಕ್ಕಿದರು. ಕ್ರೀಡಾ ತರಬೇತಿ ನೀಡುವ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಕ್ರೀಡಾ ತಂಡವನ್ನು ಪ್ರೋತ್ಸಾಹಿಸಿದರು.ಕಾಲೇಜಿನ ಹಳೇಯ ವಿದ್ಯಾರ್ಥಿ ಚಂದ್ರಶೇಖರ್ ಅವರಿಂದ ತರಬೇತಿಯನ್ನು ಕೊಡಿಸಿ ದರು. ಜೊತೆ ಆಟಗಾರರೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದರು.ತಂಡಕ್ಕೆ ಗೆಲವು ಸಾಧ್ಯವಾಗದಿದ್ದರೂ ಗಮನಾರ್ಹವಾದ ಆಟ ಪ್ರದರ್ಶಿ ಸಿದ್ದರಿಂದ ವಿದ್ಯಾ ರಾಷ್ಟ್ರೀಯ ಸ್ಪರ್ಧೆಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದರು. ರಾಷ್ಟ್ರೀಯ ಸ್ಪರ್ಧೆಯಲ್ಲಿ ಗಮನ ಸೆಳೆಯುವ ಆಟ ಪ್ರದರ್ಶಿಸಿ ಮೂರನೇ ಬಹುಮಾನವನ್ನು ತಮ್ಮ ಮುಡಿಗೇರಸಿಕೊಂಡಿದ್ದಾರೆ. ಓದಿನಲ್ಲಿ ಯೂ ಮುಂದುರಿರುವ ವಿದ್ಯಾ ಆಟ ದೊಂದಿಗೆ ಹಾಡುಗಾರರಗಿದ್ದು ಬಹು ಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ.ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ 100ಮೀ. ಓಟದಲ್ಲಿ ಭಾಗವ ಹಿಸಿದ ವಿದ್ಯಾರ್ಥಿ ದರ್ಶನ ಅಥ್ಲೆಟಿಕ್ ಮಾತ್ರವಲ್ಲದೆ, ವಾಲಿಬಾಲ್ ಆಟಗಾರ ರಾಗಿದ್ದು ಹೊರಗಿನ ಸ್ಪರ್ಧೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದರೆ.

ಕಾಲೇಜಿನಲ್ಲಿಯೇ ಕಾಯಂ ಕೋಚ್ ಹಾಗೂ ಉತ್ತಮವಾದ ಅಟದ ಮೈದಾನ ಇದ್ದರೆ ನಾವು ಸಹ ಅಂತರರಾಷ್ಟ್ರೀಯ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬಹುದು ಎಂಬುದು ಸಾಧಕ ವಿದ್ಯಾರ್ಥಿಗಳ ಮನದಾಳದ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry