ಹಳೇಬೀಡು: ರೈತ ಆತ್ಮಹತ್ಯೆ

7

ಹಳೇಬೀಡು: ರೈತ ಆತ್ಮಹತ್ಯೆ

Published:
Updated:

ಹಳೇಬೀಡು: ಶುಂಠಿ ಬೆಲೆ ಕುಸಿತದಿಂದ ಬೇಸತ್ತ ರೈತ ಭೂದೇಶ್ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಕೊಡಿಕೊಪ್ಪಲು ಗ್ರಾಮದಲ್ಲಿ  ಶುಕ್ರವಾರ ರಾತ್ರಿ  ನಡೆದಿದೆ.ಭೂದೇಶ್ ಅವರಿಗೆ ಎರಡು ಎಕರೆ ಜಮೀನು ಇತ್ತು. ಮಳೆ ಇಲ್ಲದೆ ಕೊಳವೆ ಬಾವಿ ಬತ್ತಿ ಹೋಗಿತ್ತು. ಸಾಲ ಮಾಡಿ ಮೂರು ಸ್ಥಳಗಳಲ್ಲಿ ಬಾವಿ ತೋಡಿಸಿದ್ದರೂ ನೀರು ಬಂದಿರಲಿಲ್ಲ. ಒಂದು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದರು. ಬೆಲೆ ಕುಸಿದಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಸಾಣೇನಹಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ರೂ.30 ಸಾವಿರ ಹಾಗೂ ಕೈ ಸಾಲಗಳು ಸೇರಿದಂತೆ ಸುಮಾರು 3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry