ಹಳ್ಳಿಗಳತ್ತ ರಂಗಭೂಮಿ ಕೊಂಡೊಯ್ದ ಸಿಜಿಕೆ: ಪ್ರಸನ್ನ

7
ಸಂಸ ಬಯಲು ರಂಗಮಂದಿರದಲ್ಲಿ ಸಿಜಿಕೆ ಸ್ಮರಣೋತ್ಸವ

ಹಳ್ಳಿಗಳತ್ತ ರಂಗಭೂಮಿ ಕೊಂಡೊಯ್ದ ಸಿಜಿಕೆ: ಪ್ರಸನ್ನ

Published:
Updated:
ಹಳ್ಳಿಗಳತ್ತ ರಂಗಭೂಮಿ ಕೊಂಡೊಯ್ದ ಸಿಜಿಕೆ: ಪ್ರಸನ್ನ

ಬೆಂಗಳೂರು: ‘ನಗರಮುಖಿಯಾಗಿದ್ದ ರಂಗಭೂಮಿಯ ಕಿವಿಹಿಂಡಿ ಹಳ್ಳಿಗಳತ್ತ ಕೊಂಡೊಯ್ದವರು ಸಿ.ಜಿ.ಕೆ. ಸೃಜನಶೀಲ ಕಲಾವಿದ, ಒಳ್ಳೆಯ ಕುಶಲಕರ್ಮಿ’ ಎಂದು ರಂಗನಿರ್ದೇಶಕ ಪ್ರಸನ್ನ ಸ್ಮರಿಸಿದರು.ರಂಗ ನಿರಂತರ ಸಾಂಸ್ಕೃತಿಕ ಸಂಘವು ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಕಾರ್ಯ­ಕ್ರಮ­ವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ರಂಗಭೂಮಿಯು ಮನ­ರಂಜನೆ ಮತ್ತು ಜನಪರ ಚಳವಳಿ ಎರಡನ್ನೂ ಪ್ರತಿನಿಧಿಸಬೇಕು ಎಂಬು­ದನ್ನು ನೆನಪಿಸಿದವರು, ರಂಗ ಕಲಾ­ವಿದರಿಗೆ ಕೀಳರಿಮೆಯೂ ಇಲ್ಲ ಮೇಲ­ರಿಮೆಯೂ ಇಲ್ಲ ಎಂಬುದನ್ನು ತೋರಿಸಿ­ದವರು ಸಿಜಿಕೆ’ ಎಂದು ನೆನಪಿಸಿದರು.ನಟ ಪ್ರಕಾಶ ರೈ ಮಾತನಾಡಿ, ‘ಸಿಜಿಕೆ ಅವರು ನನಗೆ ನೇರವಾಗಿ ಗುರುಗಳಲ್ಲ. ಅವರು 150 ದಿನಗಳ ಪ್ರಯೋಗಾತ್ಮಕ ರಂಗೋತ್ಸವವನ್ನು ಏರ್ಪಡಿಸಿದಾಗ ನನ್ನ ಊರು, ಹೆಸರು ಏನೆಂದು ಕೇಳದೆ ನನಗೆ ಮೂರು ನಾಟಕಗಳಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಆ ನಾಟಕಗಳ ಪಾತ್ರ ಮಾಡುವಾಗಲೇ ಅವರಿಂದ ಬಹಳಷ್ಟು ಕಲಿತೆ’ ಎಂದು ನೆನಪಿಸಿಕೊಂಡರು.ಸಾಹಿತಿ ಕೆ.ಮರುಳಸಿದ್ದಪ್ಪ, ‘ಸಿಜಿಕೆ ಅಪರೂಪದ ಸಂಘಟಕ. ಶಿಸ್ತು, ಶ್ರದ್ಧೆ­ಯಿಂದ ರಂಗಭೂಮಿಗೆ ಅಕಾಡೆಮಿಕ್‌ ಸ್ವರೂಪ ನೀಡಿದವರು. ರಂಗಭೂಮಿ, ರಾಜಕೀಯ, ಸಾಮಾಜಿಕ ಬಳಗವನ್ನು ಒಟ್ಟು ಮಾಡಿ ಕಟ್ಟಿದವರು’ ಎಂದರು.ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿಯೇಕೇ?

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಹಳ ನಿರೀಕ್ಷೆ­ಗಳಿದ್ದವು. ಆದರೆ, ನಿರೀಕ್ಷೆಯಂತೆ ಸರ್ಕಾರದಿಂದ ಕೆಲಸಗಳು ಆಗು­ತ್ತಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳಾಗುತ್ತ ಬಂದರೂ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ­ವಾಗಿಲ್ಲ. ಮುಂದೆ ಲೋಕಸಭಾ ಚುನಾವಣೆಯಿದೆ. ನೀತಿ ಸಂಹಿತೆ ಹೆಸರಿನಲ್ಲಿ ನೇಮಿಸುವ ಹಾಗಿಲ್ಲ ಎಂದು ಸರ್ಕಾರ ಸಬೂಬು ಹೇಳು­ತ್ತದೆ. ಇದರಿಂದ ಮತ್ತೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ತಡವಾಗು­ತ್ತದೆ. ಅಕಾಡೆಮಿಗಳಿಲ್ಲದೆ ಸಾಂಸ್ಕೃತಿಕ ನೀತಿ ನಿರೂಪಣೆ ಸಮಿತಿ ಏಕೆ ಬೇಕು?

–ಕೆ.ಮರುಳಸಿದ್ದಪ್ಪ, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry