ಹಳ್ಳಿಗಳಲ್ಲೂ ಬ್ಯಾನರ್ ಹಾವಳಿ

7

ಹಳ್ಳಿಗಳಲ್ಲೂ ಬ್ಯಾನರ್ ಹಾವಳಿ

Published:
Updated:

ಸಮಾಜದ ಒಳಿತಿಗೆ ದುಡಿದವರ ಚಿತ್ರಗಳನ್ನು ವಿಶೇಷ ಸಂದರ್ಭಗಳಲ್ಲಿ ಅನಾವರಣ ಮಾಡಿ ಅವರ ನೆನಪು ಮಾಡಿಕೊಂಡು ಕೃತಜ್ಞತೆ ಸಲ್ಲಿಸುವ ಪರಿಪಾಠ ಹಿಂದಿನ ಕಾಲದಲ್ಲಿತ್ತು. ವಾಸ ಮಾಡುವ ಬೀದಿಯ ಜನರಿಗಾಗಿ ಏನನ್ನೂ ಮಾಡದ ವ್ಯಕ್ತಿಗಳ ದೊಡ್ಡ ಬ್ಯಾನರ್‌ಗಳನ್ನು ಬೀದಿ, ಬಸ್ ನಿಲ್ದಾಣ ಮತ್ತಿತರ ಕಡೆ ಇಟ್ಟು ಅವರು ಮಹಾನ್ ವ್ಯಕ್ತಿಗಳೆಂದು ಬಿಂಬಿಸುವ ಕಾರ್ಯ ನಡೆಯುತ್ತಿದೆ. ಈಗ ಎಲ್ಲಡೆ ಬ್ಯಾನರ್‌ಗಳ ಹಾವಳಿ ಮಿತಿ ಮೀರಿದೆ.  ಅಪಾತ್ರರೂ ಇವುಗಳಲ್ಲಿ ನೇತಾರರಂತೆ ಕಾಣಿಸಿಕೊಳ್ಳುತ್ತಿದ್ದಾರೆ! ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕುವ ಪದ್ಧತಿಗೆ ಸರ್ಕಾರ ಕಡಿವಾಣ ಹಾಕಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry