ಹಳ್ಳಿಗಳು ಪ್ರೀತಿಯ ಬಳ್ಳಿಗಳಾಗಲಿ

7

ಹಳ್ಳಿಗಳು ಪ್ರೀತಿಯ ಬಳ್ಳಿಗಳಾಗಲಿ

Published:
Updated:

ಚಿಕ್ಕೋಡಿ: ಇಡೀ ವಿಶ್ವಕ್ಕೆ ಮಾದರಿಯಾಗಿ ದೇಶದ ಸಂಸ್ಕೃತಿ-ಸಂಪ್ರದಾಯಗಳನ್ನು ಮೈತುಂಬ ಹೊದ್ದುಕೊಂಡಿರುವ ಹಳ್ಳಿಗಳು ಆಧುನಿಕತೆಗೆ ಮಾರು ಹೋಗಿ ದ್ವೇಷದ ಕೊಳ್ಳಿಗಳಾಗದೇ ಪ್ರೀತಿಯ ಬಳ್ಳಿಗಳಾಗಬೇಕು ಎಂದು ಇಲ್ಲಿನ ಚರಮೂರ್ತಿಮಠದ ಶ್ರೀ ಸಂಪಾದನ ಸ್ವಾಮೀಜಿ ಹೇಳಿದರು.ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯವು ತಾಲ್ಲೂಕಿನ ಕಮತೇನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಪರಿಸರದಲ್ಲಿ ಬೆಳೆದುಕೊಂಡು ಬಂದಿರುವ ಸಹಬಾಳ್ವೆ, ಸಾಮರಸ್ಯ ಮತ್ತು ಸೇವಾಭಾವನ್ನು ಯುವ ಜನಾಂಗ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.  ಜಿ.ಪಂ. ಸದಸ್ಯ ಮಹೇಶ ಭಾತೆ ಶಿಬಿರ ಉದ್ಘಾಟಿಸಿ ಮಾತನಾಡಿ,, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮುಂದಾಗಬೇಕು ಎಂದರು.ಪ್ರಾಚಾರ್ಯ ಡಾ.ಎ.ಪಿ. ಬಿರಾದಾರಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಯೋಜಕ ಡಾ.ಎಸ್.ಎಂ. ರಾಯಮಾನೆ ಸ್ವಾಗತಿಸಿದರು. ಸ್ವಪ್ನಾ ಖಿಲಾರೆ ಪರಿಚಯಿಸಿದರು. ಮೀನಾಕ್ಷಿ ವಂದೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಜಮದಾಡೆ ನಿರೂಪಿಸಿದರು. ಲಲಿತಾ ಶಿಂಧೆ ವಂದಿಸಿದರು.       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry