ಬುಧವಾರ, ಜೂನ್ 16, 2021
28 °C

ಹಳ್ಳಿಗೆ ಹೊಸ ರೂಪ ನೀಡಿದ ಉದ್ಯೋಗ ಖಾತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಬಡ ಕೃಷಿ ಕೂಲಿ ಕಾರ್ಮಿಕರ ಎರಡು ಹೊತ್ತಿನ ತುತ್ತಿನ ಚೀಲ ತುಂಬಿಸುವ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲ ಉದ್ದೇಶದಿಂದ ರೂಪಿತಗೊಂಡಿರುವ ಯೋಜನೆಯೇ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ.ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ಹಳ್ಳಿಗಳಲ್ಲಿ ಶಾಲೆ, ಆಸ್ಪತ್ರೆ ಹಾಗೂ ಸಮುದಾಯ ಭವನಗಳ ತಡೆಗೋಡೆ, ಚರಂಡಿ ನಿರ್ಮಾಣ, ರಸ್ತೆ ಅಭಿವೃದ್ದಿ, ಜಮೀನುಗಳಲ್ಲಿ ಬದು ನಿರ್ಮಾಣ, ಚೆಕ್ ಡ್ಯಾಂ ಮುಂತಾದ ಅಭಿವೃದ್ಧಿ ಕಾಮಗಾರಿ ಮೂಲಕ ಅನುಷ್ಠಾನಗೊಳಿಸುತ್ತಿರುವ ಈ ಮಹತ್ವಾಕಾಂಕ್ಷೆ ಯೋಜನೆಯ ರ್ದುಲಾಭ ಪಡೆದ ಕೆಲವು ಅಧಿಕಾರಿಗಳು ಜನಪ್ರತಿನಿಧಿಗಳು ಜೈಲು ಸೇರಿ ಮೊಕದ್ದಮೆ ಎದುರಿಸುತ್ತಿರುವ ನಿದರ್ಶನಗಳು ಜಿಲ್ಲೆಯಲ್ಲಿಯೇ ಬಹಳಷ್ಟು ಇವೆ.ಇಂತಹ ನಿರಾಶದಾಯಕ ಸನ್ನಿವೇಶದಲ್ಲೂ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ವಿಷಯದಲ್ಲಿ ತಾಲ್ಲೂಕಿನ ಮಾಡಾಳು ಗ್ರಾಮ ಮಾದರಿಯಾಗಿದೆ.2011-12ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಕ್ರಿಯಾ ಯೋಜನೆಯಡಿ ಮಾಡಾಳು ಗ್ರಾಮವೂ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಆಡಳಿತ 30 ಲಕ್ಷ ರೂಪಾಯಿ ಕಾಮಗಾರಿಗಳ ಕ್ರಿಯಾ ಯೋಜನೆ ಪಟ್ಟಿ ತಯಾರಿಸಿ ಅನುಮೋದನೆಗಾಗಿ ಜಿ.ಪಂಗೆ ಕಳಿಸಿಕೊಟ್ಟಿತ್ತು. ಜಿ.ಪಂ ಅನುಮತಿ ನೀಡಿದ್ದು, ಕೆಲಸ ತ್ವರಿತವಾಗಿ ಆರಂಭವಾಗಿ ಈಗ ಮುಗಿಯುವ ಹಂತ ತಲುಪಿದೆ.ಮಾಡಾಳು ಗ್ರಾಮದ ಸ್ವರ್ಣಗೌರಿ ಸಮುದಾಯ ಭವನದ ಮುಂಭಾಗದಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, ಊರ ಮುಂದಿನ ಕೆರೆ, ಹತ್ತಿರದ ಸ್ವರ್ಣಗೌರಿ ಅನ್ನ ದಾಸೋಹದ ಕಟ್ಟಡ ಪಕ್ಕದಲ್ಲಿ ಕೆರೆಗೆ ತಡೆ ಗೋಡೆ ನಿರ್ಮಾಣ ಕಾಮಗಾರಿ 3ಲಕ್ಷ ರೂಪಾಯಿ ಹಾಗೂ ಬಡಗಿ ಚನ್ನಬಸ ವಯ್ಯ ಮನೆಯಿಂದ ಕತ್ತೆಹಳ್ಳದವರೆಗೆ ಬಸಿ ಕಾಲುವೆ 80 ಸಾವಿರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿವೆ. ಯಂತ್ರ ಬಳಸದೇ ಕೂಲಿ ಕಾರ್ಮಿಕರೇ ಗುಣಮಟ್ಟದ ಹಾಗೂ ಪಾರದರ್ಶಕ ಕಾಮಗಾರಿ ನಿರ್ವಹಿಸಿರುವುದು ಕಂಡುಬರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.