ಹಳ್ಳಿ ಮೇಷ್ಟ್ರಿಗೆ ರಾಷ್ಟ್ರ ಪ್ರಶಸ್ತಿ ಗರಿ

7

ಹಳ್ಳಿ ಮೇಷ್ಟ್ರಿಗೆ ರಾಷ್ಟ್ರ ಪ್ರಶಸ್ತಿ ಗರಿ

Published:
Updated:
ಹಳ್ಳಿ ಮೇಷ್ಟ್ರಿಗೆ ರಾಷ್ಟ್ರ ಪ್ರಶಸ್ತಿ ಗರಿ

ಲಿಂಗಸುಗೂರು(ಮುದಗಲ್ಲು): ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆದಾಪುರ ಕಲ್ಲು ಗಣಿಗಾರಿಕೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ  ಖ್ಯಾತಿ ಪಡೆದುಕೊಂಡ ಗ್ರಾಮ. ಆದಾಪುರ ಪಾ್ರಥಮಿಕ ಶಾಲಾ ಮುಖ್ಯಗುರು ಹಾಜಿಮಲಂಗ್‌ ಬಾಬಾ ಅವರು ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನವಾಗಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.ಮುದಗಲ್ಲ ಪಟ್ಟಣದಲ್ಲಿ ಶೇಖದಾವಲಸಾಬ ಮತ್ತು ಮಹಿಬೂಬ್ಬಿ ದಂಪತಿ ಪುತ್ರರಾಗಿ ಜನಿಸಿದ ಹಾಜಿಮಲಂಗ್‌ಬಾಬಾ ಶಿಕ್ಷಣವನ್ನು ಹುಟ್ಟುರಿನಲ್ಲಿಯೇ ಮುಗಿಸಿದ್ದಾರೆ. 1985ರಲ್ಲಿ ಪಾ್ರಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡ ಅವರು ಬೈಲಗುಡ್ಡದಲ್ಲಿ ತಮ್ಮ ವೃತ್ತಿ ಬದುಕು ಶುರು ಮಾಡಿದರು. ಬೈಲಗುಡ್ಡ, ಕಡದರಹಾಳ, ಕನ್ನಾಪುರಹಟ್ಟಿ, ಜಾಂತಾಪುರು, ಹೂನೂರುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಉತ್ತಮವಾದ ಸೇವೆಯಿಂದಲೇ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡ ಬಂದಿವೆ. ಕನ್ನಾಪುರಹಟ್ಟಿ ಶಾಲೆಯಲ್ಲಿರುವಾಗ ಇವರ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಶಿಕ್ಷಕರು ಅಧ್ಯಯನ ಮಾಡಲು ಬಂದಿದ್ದರು. ಜಾಗತಿಕ ತಂಡದಲ್ಲಿ ವಿದೇಶ ಶಿಕ್ಷಣ ತಜ್ಞೆ ಮೇರಿಕ್ರಾರಿ ಪೂರ್ವೆ ನೇತೃತ್ವದ ತಂಡ ಭೇಟಿ ನೀಡಿತ್ತು. ಹೂನೂರು ಶಾಲೆಗೆ ವರ್ಗಾವಣೆಗೊಂಡಾಗ ಈ ಎಲ್ಲ ಪ್ರತಿಭೆ, ಸಾಧನೆ ಗುರುತಿಸಿದ ಶಿಕ್ಷಣ ಇಲಾಖೆ 2009–10ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು.ಮುಂದೆ ಮುಖ್ಯಗುರುಗಳಾಗಿ  ಬಡ್ತಿ ಹೊಂದಿ ಆದಾಪುರ ಪಾ್ರಥಮಿಕ ಶಾಲೆಗೆ ಬಂದರು. ಶಾಲೆಯನ್ನು ಕೂಡ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮ ವಹಿಸಿದರು. ಅವರು ಸೇವೆ ಸಲ್ಲಿಸಿ ಬಂದಿರುವ ಯಾವುದೇ ಶಾಲೆಗೆ ಭೇಟಿ ನೀಡಿದರು ಕೂಡ ಅಲ್ಲಿನ ಕೊಠಡಿಗಳು, ಗೋಡೆಗಳು, ಶೈಕ್ಷಣಿಕ ಸಾಮಗ್ರಿಗಳು ಹಾಜಿಮಲಂಗ್‌ಬಾಬಾ ಹೆಸರು ಹೇಳುತ್ತವೆ. ಅವರ ಸೇವೆಗೆ ಪ್ರಸಕ್ತ ಸಾಲಿನ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ  ಅವರನ್ನು ಹುಡುಕಿಕೊಂಡು ಬಂದಿದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪ್ರಶಸ್ತಿ ನೀಡಿ ಗೌರವಿಸಿರುವುದು ಇಡಿ ಶಿಕ್ಷಕ ಸಮೂಹಕ್ಕೆ ಸಂತಸ ಉಂಟು ಮಾಡಿದೆ.ರಾಷ್ಟ್ರಪ್ರಶಸ್ತಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಜಿಮಲಂಗ್‌ಬಾಬಾ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ ತಾವು ಯಾವುದೇ ಪ್ರಶಸ್ತಿ ಸಿಗುತ್ತದೆ ಎಂದು ಕೆಲಸ ಮಾಡಲಿಲ್ಲ. ಸಮುದಾಯದ ಸಹಕಾರದಲ್ಲಿ ಶಿಕ್ಷಣ ಇಲಾಖೆ ಪ್ರತಿಯೊಂದು ಯೋಜನೆಗಳನ್ನು ಕ್ರಿಯಾತ್ಮಕವಾಗಿ ಅನುಷಾ್ಠನಗೊಳಿಸಿದ ತೃಪ್ತಿ ಇದೆ. ಅಧಿಕಾರಿಗಳು, ಸಹದ್ಯೋಗಿ ಶಿಕ್ಷಕರು, ಸಮುದಾಯದ ಪ್ರತಿಯೊಬ್ಬ ಮುಖಂಡರ ಸಹಕಾರ, ಕುಟುಂಬದವರ ಸಹನೆ ಈ ಪ್ರಶಸ್ತಿ ಸಿಗಲು ಸಹಾಯಕವಾಯಿತು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry