ಶುಕ್ರವಾರ, ನವೆಂಬರ್ 15, 2019
21 °C

ಹಳ್ಳಿ ಸೊಗಡಿನ ಸೊಬಗು ಕುವೆಂಪು ಸಾಹಿತ್ಯದ ಶ್ರೇಷ್ಠತೆ

Published:
Updated:

ಹೊಸನಗರ:  ಗ್ರಾಮೀಣ ಸೊಗಡಿನ ಸೊಬಗು ನೆಲೆಯೂರಿದ್ದು, ಕುವೆಂಪು, ತೇಜಸ್ವಿ ಮತ್ತು ಕಂಬಾರರ ಸಾಹಿತ್ಯದ ಶ್ರೇಷ್ಠತೆ ಎಂದು ಪ್ರಾಧ್ಯಾಪಕ ನಟರಾಜ್ ಅರಳಸುರುಳಿ ಅಭಿಪ್ರಾಯಪಟ್ಟರು.ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಬಿದನೂರು ನಗರದ ನಗರ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಮಿನಾ ಸೆರಾವೋ ಮತ್ತು ಎಂ. ಲೂಯಿಸ್ ಸೆರಾವೋ ನೆನಪಿನ ದತ್ತಿನಿಧಿ ಕಾರ್ಯಕ್ರಮ ಮತ್ತು ದತ್ತಿದಾನಿಗಳಾದ ಎಲಿಜಬೆತ್ ಶರಾಂ ಮತ್ತು ಡಾ.ಮಾರ್ಷಲ್ ಶರಾಂ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.ಕನ್ನಡ ಸಾಹಿತ್ಯ ಮತ್ತು ಗ್ರಾಮೀಣ ಪರಂಪರೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಇಂದು ಬಹುಪಾಲು ವಿದ್ಯಾರ್ಥಿಗಳಿಗೆ ಕುವೆಂಪು ಕಾದಂಬರಿಗಳಲ್ಲಿ ವ್ಯಕ್ತವಾದ ಸೂರಂಕಲು, ಮುಷ್ಟಿ ಅಂತಹ ಪದಗಳ ಕನಿಷ್ಠ ಜ್ಞಾನವಿಲ್ಲದಿರುವುದು ವಿಷಾದನೀಯ ಎಂದರು.ತಾರಸಿ ಮನೆಗಳ ನಗರೀಕರಣದಿಂದ ಗ್ರಾಮೀಣ ಭಾಗದಲ್ಲಿ ಹುಟ್ಟಿದರೂ ಪರಂಪರೆ ಮರೆಮಾಚುತ್ತಿರುವುದು ಮಲೆನಾಡಿನ ದುರ್ದೈವವೇ ಸರಿ. ಗ್ರಾಮೀಣ ಕಲೆ ಪರಂಪರೆ ಇಂದಿಗೂ ಪ್ರಚಾರದಲ್ಲಿಡುವ ಕಲೆಗಳಲ್ಲಿ ಯಕ್ಷಗಾನ ಒಂದು ಎಂದರು. ದತ್ತಿದಾನಿ ಮತ್ತು ಕೊಡಚಾದ್ರಿ ಪ್ರಥಮ ದರ್ಜೆಕಾಲೇಜು ಸಹ-ಪ್ರಾಧ್ಯಾಪಕ ಡಾ.ಮಾರ್ಷಲ್ ಶರಾಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ತಂದೆ-ತಾಯಿ ಹೆಸರಿನಲ್ಲಿ ದತ್ತಿನಿಧಿ ಪ್ರಥಮ ಬಾರಿಗೆ ಇತಿಹಾಸ ನಗರ- ಬಿದನೂರುನಲ್ಲಿ ಪ್ರಾರಂಭ ಆಗುತ್ತಿರುವುದಕ್ಕೆ ಸಂತೋಷವಾಗಿದೆ ಎಂದರು.ತಾಲ್ಲೂಕು ಕಸಾಪ ಅಧ್ಯಕ್ಷ ಕೆಸಿನಮನೆ ರತ್ನಾಕರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಂಬ್ರಯ್ಯಮಠ, ಹೋಬಳಿ ಘಟಕದ ಅಧ್ಯಕ್ಷ ಶೇಷಾದ್ರಿ, ಮುಖ್ಯಶಿಕ್ಷಕ ಸುಬ್ರಹ್ಮಣ್ಯ, ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ. ಚಂದ್ರಪ್ಪ ಹಾಜರಿದ್ದರು.ಬಾಲಚಂದ್ರ ಉಡುಪ ಪ್ರಾರ್ಥಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ ಚಕ್ಕಾರ್ ವಂದಿಸಿದರು.                                                                                                                            ಬೇಸಗೆ ಚೆಸ್ ಶಿಬಿರ

ಭದ್ರಾವತಿ: ಇಲ್ಲಿನ ತಾಲ್ಲೂಕು ಚೆಸ್ ಅಸೋಸಿಯೇಷನ್, ಎಂಪಿಎಂ ಚೆಸ್ ಕ್ಲಬ್‌ನಿಂದ ಎರಡು ಹಂತದಲ್ಲಿ ಬೇಸಗೆ ಚೆಸ್ ತರಬೇತಿ ಶಿಬಿರ ಏರ್ಪಡಿಸಿವೆ.ಪ್ರತಿದಿನ ಸಂಜೆ 5.15ರಿಂದ 6.30ರ ತನಕ ಹಾಲಪ್ಪ ಸರ್ಕಲ್ ಮತ್ತು ಸಿಎನ್ ರಸ್ತೆ ಸ್ಪ್ಯಾನ್ ಕಂಪ್ಯೂಟರ್ ಎಜುಕೇಷನ್, ಭವಾನಿ ಕಾಂಪ್ಲೆಕ್ಸ್‌ನಲ್ಲಿ ಹಾಗೂ ಬೆಳಿಗ್ಗೆ 7ರಿಂದ 8.15ರ ತನಕ ಕಾಗದನಗರ ಪೇಪರ್‌ಟೌನ್ ಇಂಗ್ಲಿಷ್ ಶಾಲೆಯಲ್ಲಿ ಶಿಬಿರ ನಡೆಯಲಿದೆ.ಮಾಹಿತಿಗೆ ಮೊಬೈಲ್: 99864 07613, 94482 18706 ಸಂಪರ್ಕಿಸುವಂತೆ ಅಧ್ಯಕ್ಷ ಎಸ್.ಜಿ. ನಾಗರಾಜ ಕೋರಿದ್ದಾರೆ.

ಪ್ರತಿಕ್ರಿಯಿಸಿ (+)