ಮಂಗಳವಾರ, ಮೇ 11, 2021
20 °C

ಹವಾಮಾನ ಬದಲಾವಣೆ ತಂದ ಅನಾರೋಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಮುಂಗಾರು ಪ್ರವೇಶಿಸುವ ಮೊದಲೇ ಸುರಿದ ಮಳೆ ಒಂದೆಡೆ ಬಿತ್ತನೆಗಾಗಿ ಕಾದಿದ್ದ ರೈತನಲ್ಲಿ ಸಂತಸ ಮೂಡಿಸಿದ್ದರೆ ಮತ್ತೊದೆಡೆ ಬಿರು ಬಿಸಿಲಿನಿಂದ ಕಾದು ಕಾವಲಿಯಾಗಿದ್ದ ಭೂಮಿ ಮಳೆಯ ಸಿಂಚನದಿಂದ ತಂಪಾಗಿದ್ದು, ಇದರಿಂದಾದ ಹವಾಮಾನ ಬದಲಾವಣೆ ಜನರ ಆರೋಗ್ಯ ಏರುಪೇರು ಮಾಡಿ, ಜನರನ್ನು ಆರೋಗ್ಯ ಕೇಂದ್ರದತ್ತ ಮುಖ ಮಾಡುವಂತೆ ಮಾಡಿದೆ.ಕಳೆದ ಒಂದು ವಾರದ ಅವಧಿಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತೀ ದಿನ ಸುಮಾರು 200 ಕ್ಕೂ ಅಧಿಕ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದ ಮಹಿಳೆಯರಾಗಿರುವುದು ಕಂಡುಬಂದಿದೆ. ಹೆಚ್ಚಿನ ರೋಗಿಗಳು ಸುಸ್ತು, ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ರಕ್ತ ಪರೀಕ್ಷೆಯಲ್ಲಿ ಎರಡು ಟೈಫಾಯ್ಡ ಪ್ರಕರಣಗಳನ್ನು ಹೊರತು ಪಡಿಸಿದರೆ ಮಲೇರಿಯಾ, ಡೆಂಗೆ ಪ್ರಕರಣಗಳು ಪತ್ತೆಯಾಗದಿರುವುದು ಹೋಬಳಿಯ ಜನರಲ್ಲಿ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಿದೆ.ಸಾಮಾನ್ಯವಾಗಿ ಕಂಡು ಬರುವ ಜ್ವರಕ್ಕೆ ಆಂಟಿಬಯೋಟಿಕ್ ಮತ್ತು ಹೆಚ್ಚು ಸುಸ್ತುನಿಂದ ಬಳಲುತ್ತಿರುವವರಿಗೆ ಗ್ಲುಕೋಸ್ ನೀಡುತ್ತಿರುವುದು ಕಂಡು ಬಂದಿದ್ದು. ಮಂಗಳವಾರ ಚಿಕಿತ್ಸೆ ಪಡೆದ 200ಕ್ಕೂ ಅಧಿಕ ಜನರಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಗ್ಲುಕೋಸ್ ಸಹಿತ ಚುಚ್ಚುಮದ್ದು ಪಡೆದಿದ್ದಾರೆ.ಮುಂಗಾರಿನ ಮಳೆ ಬಂದಾಗ ಆಗುವ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಕಂಡುಬರುವ ಸೊಳ್ಳೆ ಮತ್ತು ವೈರಸ್‌ನಿಂದ ಈ ಕಾಯಿಲೆಗಳು ಹರಡುವುದು ಸಾಮಾನ್ಯವಾಗಿದ್ದು, ಜನರು ಆಲಸ್ಯ ಮಾಡದೇ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದರೊಂದಿಗೆ ಕಾಯಿಸಿ ಆರಿಸಿದ ಶುದ್ಧ ನೀರನ್ನು ಕುಡಿಯುವ, ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಕಾಯಿಲೆ ಉಲ್ಬಣವಾಗದಂತೆ ಎಚ್ಚರವಹಿಸಬೇಕು ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಡಾ.ಪುರುಷೋತ್ತಮ್ ಸಲಹೆ ನೀಡುತ್ತಾರೆ.ಸಮೀಪದ ಕುಡ್ಲೂರು ಗ್ರಾಮದಲ್ಲಿ ಡೆಂಗೆಯಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಾಗೂ ಜನರಲ್ಲಿ ಡೆಂಗೆ ಬಗೆಗಿನ ಆತಂಕ ಕಡೆಮೆ ಮಾಡುವುದಕ್ಕಾಗಿ, ಡೆಂಗೆ ಬರದಂತೆ ತಡೆಯುವ ಅರಿವು ಕಾರ್ಯಕ್ರಮವನ್ನು ಜೂನ್ 5ರ ಇಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದು, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ದೊಡ್ಡಮಲ್ಲಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಲಿದ್ದು, ಆರೋಗ್ಯ ಇಲಾಖೆಯ, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಮತ್ತು ಶಾಲಾ ಮಕ್ಕಳಿಗೆ ಡೆಂಗ್ಯೂ ಬಗೆಗಿನ ತರಬೇತಿ ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.