ಹವಾಮಾನ ವರದಿ

ಬುಧವಾರ, ಜೂಲೈ 24, 2019
23 °C

ಹವಾಮಾನ ವರದಿ

Published:
Updated:

ಮುಂಗಾರು ದುರ್ಬಲ

ಬೆಂಗಳೂರು:
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ. ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ರಾಜ್ಯದ ಒಳನಾಡಿನಲ್ಲಿ ಮಳೆಯಾಗಿದೆ.ಕದ್ರಾ 5 ಸೆಂ.ಮೀ ಮಳೆಯಾಗಿದೆ. ಮೂಲ್ಕಿ, ಕುಂದಾಪುರ 4, ಕೊಲ್ಲೂರು, ಸಿದ್ದಾಪುರ, ಶಿರಾಲಿ, ಮಂಕಿ, ಕೊಟ್ಟಿಗೆಹಾರ 3, ಕೋಟ, ಭಟ್ಕಳ, ಗೇರುಸೊಪ್ಪ, ಅಂಕೋಲಾ, ಉಡುಪಿ, ಆಗುಂಬೆ 2, ಮೂಡಬಿದಿರೆ, ಬಂಟ್ವಾಳ, ಧರ್ಮಸ್ಥಳ, ಪಣಂಬೂರು, ಕಾರ್ಕಳ, ಮಂಚಿಕೇರಿ, ಖಾನಾಪುರ, ಲೊಂಡ, ಕಮ್ಮರಡಿ 1ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಕೆಲವು ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಕರಾವಳಿಯಿಂದ ಪಶ್ಚಿಮಾಭಿಮುಖವಾಗಿ 45 ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry