ಹಷ್ಮಿ ಹಾಸ್ಯದ `ಚಕ್ಕರ್'

7

ಹಷ್ಮಿ ಹಾಸ್ಯದ `ಚಕ್ಕರ್'

Published:
Updated:
ಹಷ್ಮಿ ಹಾಸ್ಯದ `ಚಕ್ಕರ್'

`ಕಿಸ್ಸರ್ ಬಾಯ್' ಇಮೇಜ್‌ನಿಂದ ಹೊರಬರಲು ಮನಸ್ಸು ಮಾಡಿರುವ ಇಮ್ರಾನ್ ಹಷ್ಮಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥೆಯುಳ್ಳ ಸಿನಿಮಾಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ.ಕಳೆದ ವರ್ಷ ತೆರೆಕಂಡ `ಶಾಂಘೈ' ಚಿತ್ರದಲ್ಲಿ ಪತ್ರಕರ್ತನಾಗಿ ಕಾಣಿಸಿಕೊಂಡ ಹಷ್ಮಿ ಮೆಚ್ಚುಗೆ ಗಳಿಸಿದ್ದರು. ಈ ವರ್ಷ `ಘನ್‌ಚಕ್ಕರ್', `ಏಕ್ ಥಿ ದಾಯನ್' ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. `ಬರುತ್ತಿರುವ ಚಿತ್ರಕಥೆಗಳಲ್ಲಿ ಎಚ್ಚರವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನಾನು ನಟಿಸುವ ಚಿತ್ರಗಳಲ್ಲಿ ನನ್ನದೇ ಛಾಪು ಮೂಡಿಸುವುದು ನನ್ನ ಗುಣ' ಎಂದಿದ್ದಾರೆ.ರಾಜ್‌ಕುಮಾರ್ ಗುಪ್ತಾ ನಿರ್ದೇಶಿಸುತ್ತಿರುವ ಹಾಸ್ಯಮಯ ಚಿತ್ರ `ಘನ್‌ಚಕ್ಕರ್'ನಲ್ಲಿ ಇಮ್ರಾನ್ ಜೋಡಿಯಾಗಿ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ಅವರದ್ದು ಗೃಹಿಣಿಯ ಪಾತ್ರ. `ಡರ್ಟಿ ಪಿಕ್ಚರ್' ನಂತರ ಎರಡನೇ ಬಾರಿಗೆ ಇಮ್ರಾನ್ ಹಾಗೂ ವಿದ್ಯಾ ಒಟ್ಟಿಗೆ ನಟಿಸುತ್ತಿದ್ದಾರೆ.`ನಮ್ಮ ಜೋಡಿ ಈಗ ಜನಪ್ರಿಯವಾಗಿರುವುದರಿಂದ ಚಿತ್ರಪ್ರೇಮಿಗಳು ಈ ಚಿತ್ರವನ್ನು ನೋಡುವ ತವಕದಲ್ಲಿದ್ದಾರೆ. ಜತೆಗೆ ನನ್ನ, ವಿದ್ಯಾ ನಡುವಿನ ಹೊಂದಾಣಿಕೆ ಉತ್ತಮವಾಗಿರುವುದರಿಂದ ಈ ಚಿತ್ರದಲ್ಲಿ ನಮ್ಮಿಬ್ಬರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನಾನು ಹಾಗೂ ವಿದ್ಯಾ ಸಾಕಷ್ಟು ಜಗಳವಾಡುತ್ತೇವೆ. ಆದರೂ ಒಬ್ಬರನ್ನೊಬ್ಬರು ಮನಸಾರೆ ಪ್ರೀತಿಸುವ ಪಾತ್ರ' ಎನ್ನುವ ಇಮ್ರಾನ್, ಚುಂಬನ ಚಿತ್ರಗಳಿಂದ ನಿಧಾನವಾಗಿ ದೂರವಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry