ಭಾನುವಾರ, ಏಪ್ರಿಲ್ 11, 2021
28 °C

ಹಸನ್ ಅಲಿ ಜಾಮೀನು ಅರ್ಜಿ ತಿರಸ್ಕೃತ: ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ಮುಂಬೈ (ಪಿಟಿಐ): ಪುಣೆ ಮೂಲದ ಕುದುರೆ ತಳಿ ಕೇಂದ್ರದ ಮಾಲೀಕ ಹಸನ್ ಅಲಿ ಖಾನ್‌ನ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಇಲ್ಲಿನ ಜಾರಿ ನಿರ್ದೇಶನಾಲಯದ ಮುಂದೆ ಆತ ಶರಣಾಗಿದ್ದಾನೆ. ಆತನನ್ನು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.‘ಸುಪ್ರೀಂಕೋರ್ಟ್ ಆದೇಶವನ್ನು ನಾನು ಗೌರವಿಸುತ್ತೇನೆ’ ಎಂದು ಅಲಿ ದಕ್ಷಿಣ ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯ ಆವರಣ ಪ್ರವೇಶಿಸುವ ಮುನ್ನ ಮಾಧ್ಯಮಗಳೆದುರು ಹೇಳಿದ. ಅಲಿಗೆ ಜಾಮೀನು ನೀಡಿದ ಸ್ಥಳೀಯ ನ್ಯಾಯಾಲಯದ ವರ್ತನೆಯನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತಲ್ಲದೇ, ಅಲಿಯನ್ನು ನಾಲ್ಕು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲು ಸಮ್ಮತಿ ವ್ಯಕ್ತಪಡಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.