ಸೋಮವಾರ, ನವೆಂಬರ್ 18, 2019
20 °C

ಹಸಿರುಕ್ರಾಂತಿಯ ಹರಿಕಾರನಿಗೆ ಭಾವಪೂರ್ಣ ನಮನ

Published:
Updated:

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜಯಂತಿಯನ್ನು ಆಚರಿಸಲಾಯಿತು.

ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಮತ್ತಿತರರು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಎಸ್ಪಿ ಭೂಷಣ ಬೊರಸೆ, ಸಿಇಒ ಪಿ.ಸಿ. ಜಯಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಎಸಿ ಎಂಎಸ್‌ಎನ್ ಬಾಬು, ತಹಶೀಲ್ದಾರ್ ಮಮತಾ ಇದ್ದರು.ಅಖಿಲ ಕರ್ನಾಟಕ ಬಾಬು ಜಗಜೀವನ್‌ರಾಂ ಸಂಘಟನೆಗಳ ಒಕ್ಕೂಟ: ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಕೃಷಿ ಮಂತ್ರಿಯಾಗಿದ್ದ ಅವರು, ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರ ಭದ್ರತೆ ಒದಗಿಸಿದರು ಎಂದರು.ಮುಖಂಡರಾದ ಪಾಪಯ್ಯ, ಹಂಪಾಪುರ ಶಿವರಾಮ್, ಡಿ.ರಾಜು, ಪುಟ್ಟಸ್ವಾಮಿ, ರಂಗಲಕ್ಷಮ್ಮ, ಚಿಕ್ಕ ಅರಸಯ್ಯ ಮತ್ತಿತರರು ಉಪಸ್ಥಿತರಿದ್ದರು.`ಶೋಷಿತರು ಸ್ವಾವಲಂಬಿಗಳಾಗಿ'

ಶ್ರೀರಂಗಪಟ್ಟಣ: ಶೋಷಿತ ವರ್ಗಗಳ ಜನರು ಸಿಗುವ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ತಹಶೀಲ್ದಾರ್ ಅರುಳ್‌ಕುಮಾರ್ ಹೇಳಿದರು.  ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಏರ್ಪಡಿಸಿದ್ದ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.  ಬಾಬೂಜಿ ಹಿಂದುಳಿದ ವರ್ಗದಲ್ಲಿ ಹುಟ್ಟಿ ಉಪ ಪ್ರಧಾನಿ ಹುದ್ದೆಗೆ ಏರಿದ ಸಾಧಕರು. ಕೃಷಿ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಹಸಿರುವ ಕ್ರಾಂತಿಯ ಹರಿಕಾರ ಎಂದು ಹೆಸರಾಗಿದ್ದಾರೆ.ಇಂತಹ ಮಹನೀಯರ ಜೀವನ ಚರಿತ್ರೆ ಓದಿ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು. ಹೆಚ್ಚುವರಿ ತಹಶೀಲ್ದಾರ್ ಪದ್ಮಾ, ಉಪ ತಹಶೀಲ್ದಾರ್ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಎಸ್.ಪ್ರಭಾ, ಬಾಬೂಜಿ ಸಂಘಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಅರಕೆರೆ ಸಿದ್ದರಾಜು, ಕೃಷಿ ಅಧಿಕಾರಿ ಕೆ.ಟಿ.ರಂಗಯ್ಯ ಇತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)