ಶನಿವಾರ, ಮೇ 8, 2021
25 °C

ಹಸಿರು ಉಳಿಸಿ

- ಅಶೋಕ್ ಕುಮಾರ್.ಎಂ,ಭದ್ರಾವತಿ Updated:

ಅಕ್ಷರ ಗಾತ್ರ : | |

ಪರಿಸರ ದಿನಾಚರಣೆ  ನೆಪದಲ್ಲಿ ವರ್ಷದಲ್ಲಿ ಒಂದು ದಿನ ಮಾತ್ರ  ಚಿಕ್ಕ ಸಸಿ ನೆಟ್ಟು ಸಂಭ್ರಮಿಸಿದರೆ ಸಾಲದು. ಅದೊಂದು ದಿನಚರಿಯಾಗಿ ಬೆಳೆಯಬೇಕಾದ ಅಗತ್ಯತೆ ಈ ದಿನಗಳಲ್ಲಿ ಹೆಚ್ಚು ಇದೆ.

ಇಂದು ಪರಿಸರದಲ್ಲಿ ಶುದ್ಧ ಆಮ್ಲಜನಕದ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆ, ಪರಿಸರದಲ್ಲಿ ಹೆಚ್ಚಿದ ಬಿಸಿ, ವಿದ್ಯುತ್ ಅಭಾವ ಹೀಗೆ ಈ ಎಲ್ಲಾ ಸಮಸ್ಯೆಗಳಿಗೆ  ಏಕೈಕ ಪರಿಹಾರ ಹಸಿರನ್ನು ರಕ್ಷಿಸಿ ಬೆಳೆಸುವುದೇ ಆಗಿದೆ.ಇತ್ತೀಚಿನ ದಿನಗಳಲ್ಲಿ ಭೂಮಿಯ ಅಂತರ್ಜಲ ಮಟ್ಟ ಕುಸಿದಿದ್ದು ಇದು ಭೂಮಿಯ ತಾಪ ಹೆಚ್ಚಲು ಹಾಗೂ ಕುಡಿಯುವ ನೀರಿನ ಕೊರತೆಗೆ ಒಂದು ಪ್ರಮುಖ ಕಾರಣವಾಗಿದೆ.ಅಲ್ಲದೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳವನ್ನು ಸೇರಿದೆ. ಹಾಗಾಗಿ ಸರ್ಕಾರ ಈ ಕೂಡಲೇ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಮಾಡಬೇಕೆಂದು ಕಾನೂನನ್ನು ಜಾರಿಗೆ ತರಬೇಕಾಗಿದೆ.ವಾಡಿಕೆಗಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಇದು ಕೃಷಿ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.