ಸೋಮವಾರ, ಮೇ 17, 2021
30 °C

ಹಸಿರು ಜೀವನ ಶೈಲಿ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಎಲ್ಲೆಡೆ ಶುದ್ಧಗಾಳಿಯ ಕೊರತೆ ಹೆಚ್ಚಾಗುತ್ತಿರುವುದರಿಂದ ಪ್ರತಿ ನಾಗರಿಕರು ಹಸಿರು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಹೇಳಿದರು.ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ಹಾಗೂ ಹೊನ್ನಾಳಿಯ ಸ್ಪೂರ್ತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ  ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರ ದಿನಚಾರಣೆಯಂದು ಒಂದು ಸಸಿ ನೆಟ್ಟು ನಾಲ್ಕು ಮಾತನಾಡಿ ಹೋದರೆ ಸಾಲದು. ಪರಿಸರ ರಕ್ಷಣೆಗೆ ನಾವೆಲ್ಲರೂ ಶ್ರಮಿಸಿದರೆ ಕಾರ್ಯಕ್ರಮಕ್ಕೊಂದು ಅರ್ಥ ಬರುತ್ತದೆ. ಪೋಷಕರಿಗೆ ಪರಿಸರವನ್ನು ನಾಶ ಮಾಡಬಾರದೆಂದು ತಿಳಿಸಿ ಜಾಗತಿ ಮೂಡಿಸುವ ಕೆಲಸ ಶಾಲಾ ಮಕ್ಕಳಿಂದ ಆಗ ಬೇಕಿದೆ ಎಂದರು.ಮಾನವನ ದುರಾಸೆಯಿಂದೆ ಮರಗಳು, ಕೆರೆಗಳು ಮಾಯವಾಗುತ್ತಿವೆ. ಇದನ್ನು ತೆಗಟ್ಟುವ ನಿಟ್ಟಿನಲ್ಲಿ ನಾವ್ಯಾರೂ ತಲೆ ಕೆಡಿಸಿಕೊಳ್ಳದೆ ಇರುವುದು ದುರದಷ್ಟಕರ. ಪರಿಸರವನ್ನು ಹಾಳು ಮಾಡುತ್ತಿರುವವರೂ ನಾವೇ ಆಗಿರುವುದರಿಂದ, ಅದನ್ನು ಉಳಿಸಿ ಬೆಳೆಸುವ ಕೆಲಸವೂ ನಮ್ಮಿಂದಲೇ ಆಗಬೇಕಿದೆ ಎಂದರು.ಅರಕೆರೆ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಇಲಾಖೆ ಭೂಮಿ ಇದ್ದು ಆ ಜಾಗದಲ್ಲಿ ಅಧಿಕಾರಿಗಳು ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಜಿ ಮಧುಗೌಡ ಮಾತನಾಡಿ, ಮರ-ಗಿಡಗಳನ್ನು ಬೆಳೆಸಿ ರಕ್ಷಿಸುವ ಕಾರ್ಯಕ್ಕೆ ಅರಣ್ಯ ಇಲಾಖೆಯ ಜೊತೆಗೆ ಪ್ರತಿಯೊಬ್ಬ ನಾಗರಿಕರು ಸಹಕಾರಿಸಬೇಕು. ಪರಿಸರವನ್ನು ನಾವು ಉಳಿಸಿ ಬೆಳೆಸಿದರೆ ಕಾಲ ಕಾಲಕ್ಕೆ ಮಳೆಯಾಗುತ್ತದೆ. ಇದರಿಂದ ಹೆಚ್ಚು ಬೆಳೆ ಬೆಳೆಯಬಹುದು ಎಂದರು.ಸ್ಫೂರ್ತಿ ಸಂಸ್ಥೆಯ ನಿರ್ದೇಶಕ ರೂಪ್ಲಾನಾಯ್ಕ ಮಾತನಾಡಿದರು.ಗ್ರಾಮ ಪಂಚಾಯ್ತಿ ಸದಸ್ಯ ಎಸ್. ಸಎಚ್ ನಾಗರಾಜ್, ಶಾಲಾ ಮುಖ್ಯ ಶಿಕ್ಷಕ ಈಶ್ವರಪ್ಪ, ವಲಯ ಅರಣ್ಯಧಿಕಾರಿ ರೇವಣಸಿದ್ದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.