ಶುಕ್ರವಾರ, ಜೂನ್ 18, 2021
24 °C

ಹಸಿರು ನಿರ್ವಾಣಕ್ಕೆ ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮರಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸಿ ಸಮತೋಲನ ಕಾಪಾಡುತ್ತವೆ. ಜೊತೆಗೆ ಮನುಷ್ಯ ಮತ್ತು ಪ್ರಾಣಿಗಳಿಗೆ ಉತ್ತಮ ಗಾಳಿ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಕೊಟ್ರೇಶ್ ಅಭಿಪ್ರಾಯಪಟ್ಟರು.ಹಿಂಡಾಲ್ಕೊ ಸಮುದಾಯ ಅಭಿವದ್ದಿ ಘಟಕ ಹಾಗೂ ಮಹಾವೀರ ಮಿರ್ಜೆ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕಾಕತಿ ಗ್ರಾಮದ ಬಳಿಯ ಕೆರೆ ದಂಡೆಯಲ್ಲಿ ಸಸಿ ನಡೆಸುವ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.`ಬೆಳಗಾವಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೋಂದಿಗೆ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ  ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಹಿಂಡಾಲ್ಕೊ ಕಂಪೆನಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ~ ಎಂದರು.ಹಿಂಡಾಲ್ಕೊ ಕಂಪೆನಿಯ ಜಂಟಿ ಅಧ್ಯಕ್ಷ ವಿ. ಶ್ರೀನಿವಾಸ ಮಾತನಾಡಿ, ಅರಣ್ಯ ಬೆಳೆಸಲು ಕಂಪೆನಿ ವತಿಯಿಂದ ಪ್ರೋತ್ಸಾಹಿಸಲಾಗುತ್ತಿದೆ. ಸ್ವಚ್ಚ ಹಾಗೂ ಹಸಿರು ಬೆಳಗಾವಿ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.ಮಹಾವೀರ ಮಿರ್ಜಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ.ಎ.ಆರ್. ರೊಟ್ಟಿ, ಹಿಂಡಾಲ್ಕೊ ಸಹಾಯಕ ಉಪಾಧ್ಯಕ್ಷ ಡಾ.ಸುರೇಶನ್ ಮುತ್ತೇಡತ್, ಸಿವಿಲ್ ಎಂಜಿನಿಯರ್ ಎಸ್.ಎನ್. ಹೂಲಿ, ಪ್ರೊ.ಎ.ಬಿ. ಪಾಟೀಲ, ಎನ್‌ಎಸ್‌ಎಸ್ ಅಧಿಕಾರಿ ಮದನಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.ಹಿಂಡಾಲ್ಕೊ ಸಮುದಾಯ ಅಭಿವೃದ್ಧಿ ಹಿರಿಯ ಅಧಿಕಾರಿ ದಿನೆಶ ನಾಯ್ಕ ಸ್ವಾಗತಿಸಿದರು. ವೈಶಾಲಿ ನಿರೂಪಿಸಿದರು. ಎಂ.ಎಂ. ರೋಗಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.